For Quick Alerts
  ALLOW NOTIFICATIONS  
  For Daily Alerts

  ಚಂದ್ರಿಕಾ ಸೋಪಿಗೆ ಹೊಸ ಚಂದ್ರ ಚಕೋರಿ ತಮನ್ನಾ

  By Rajendra
  |

  ದಿನ ಬೆಳಗಾಗುವಷ್ಟರಲ್ಲಿ ಮಾರುಕಟ್ಟೆಗೆ ನಾನಾ ನಮೂನೆಯ ಸೌಂದರ್ಯ ಸಾಬೂನು ದಾಂಗುಡಿಯಿಡುತ್ತಿವೆ. ಈ ಹೊಸ ಹೊಸ ಬ್ರಾಂಡ್‌ಗಳಿಂದ ಹಳೆ ಬ್ರಾಂಡ್‌ಗಳ ಮಾರಾಟಕ್ಕೆ ಕೊಂಚ ಹೊಡೆತ ಬೀಳುತ್ತದೆ. ಕೆಲವು ಬ್ರಾಂಡ್‌ಗಳು ಯಾವುದೇ ಹೊಡೆತಕ್ಕೂ ಬಗ್ಗಲ್ಲ ಜಗ್ಗಲ್ಲ. ಕೆಲವಂತೂ ನಾಮಾವಶೇಷವಾಗುವ ಹಂತ ತಲುಪಿವೆ.

  ಈ ರೀತಿ ಹೊಡೆತಗಳ ಮೇಲೆ ಹೊಡೆತ ತಿಂದ ಸಾಬೂನು ಚಂದ್ರಿಕಾ. ಈ ಹಿಂದೆ ಇದಕ್ಕೆ ಚಂದ್ರಿಕಾ ಆಯುರ್ವೇದಿಕ್ ಸೋಪು ಎಂದು ಕರೆಯಲಾಗುತ್ತ್ತಿತ್ತು. ವಿಪ್ರೋ ತಯಾರಿಸುತ್ತಿರುವ ಈ ಸೋಫು ತೀವ್ರ ಸ್ಪರ್ಧೆಯನ್ನು ಎದುರಿಸಲಾಗದೆ ಅಂತಿಮ ದಿನಗಳನ್ನು ಎಣಿಸುತ್ತಿದೆ. ಹೇಗಾದರೂ ಮಾಡಿ ಈ ಸೋಪಿಗೆ ಮತ್ತೆ ಜೀವ ತರಲು ಕಂಪನಿ ನಿರ್ಧರಿಸಿದೆ.ಹೊಸ ಮಾರುಕಟ್ಟೆ ತಂತ್ರವನ್ನು ಅನುಸರಿಸಿ ಚಂದ್ರಿಕಾ ಸೋಪಿನ ಪರಿಮಳವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ.

  ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ತಮನ್ನಾ ಭಾಟಿಯಾರನ್ನು ತಮ್ಮ ಉತ್ಪನ್ನದ ರಾಯಭಾರಿಯಾಗಿ ಪರಿಚಯಿಸಲು ಕಂಪನಿ ನಿರ್ಧರಿಸಿದೆ. ಶೀಘ್ರದಲ್ಲೆ ಕಿರುತೆರೆಯಲ್ಲಿ ಚಂದ್ರಿಕಾ ತರುವುದು ಹೊಸ ಉಲ್ಲಾಸ... ಎಂದು ತಮನ್ನಾ ನಗೆಬೀರಲಿದ್ದಾರೆ. ಈ ಚಂದ್ರ ಚಕೋರಿಯ ಆಗಮನದಿಂದಾದರೂ ಚಂದ್ರಿಕಾ ಸೋಪಿನ ಮಾರಾಟದಲ್ಲಿ ಚೇತರಿಕೆ ಕಂಡುಬರುತ್ತದೋ ಏನೋ. (ಏಜೆನ್ಸೀಸ್)

  English summary
  Chandrika soap the product, manufactured by Wipro, failed to cope-up with the competition and almost closed its shop. Now, the company is planning to make use of aggressive marketing techniques. Tamanna, became a household name among family audiences in South was approached to endorse the soap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X