»   »  ಸಕಲ ಕಲಾ ವಲ್ಲಭ ಈ ಭಾಗ್ಯದ ಬಳೆಗಾರ

ಸಕಲ ಕಲಾ ವಲ್ಲಭ ಈ ಭಾಗ್ಯದ ಬಳೆಗಾರ

Subscribe to Filmibeat Kannada

ಸಂಗೀತ, ಸಾಹಿತ್ಯ, ಸಾಹಸ ಮುಂತಾದವುಗಳಲ್ಲಿ ಒಂದನ್ನು ಅಭ್ಯಾಸ ಮಾಡಿ ಅದರಲ್ಲಿ ಪರಿಣಿತಿ ಹೊಂದುವುದರಲ್ಲಿ ಹೈರಾಣವಾಗಿ ಹೋಗಿರುತ್ತದೆ. ಅಂತದ್ದರಲ್ಲಿ ಎಲ್ಲಾ ವಿದ್ಯೆಗಳನ್ನು ಕಲಿತು ಎಲ್ಲರಿಂದಲ್ಲೂ ಪ್ರಶಂಸೆ ಪಡೆದುಕೊಂಡವನು ಅಸಮಾನ್ಯ ಕಲಾವಿದ ಎಂಬ ಬಿರುದಿಗೆ ಭಾಜನನಾಗುತ್ತಾನೆ. ಇದು ಕೆಲವರಿಂದ ಮಾತ್ರ ಸಾದ್ಯ.

'ಭಾಗ್ಯದ ಬಳೆಗಾರ"ನೂ ಹೀಗೆ. ಇಂಪಾದ ಹಾಡುಗಾರನಾದ ಈತ ಒಳ್ಳೆಯ ನೃತ್ಯಗಾರ ಕೂಡ. ದುಷ್ಟಹಾದಿ ತುಳಿದವರ ಮಟ್ಟ ಹಾಕುವ ಸಾಹಸಿಗನೂ ಹೌದು. ವೃತ್ತಿಯಲ್ಲಿ ಬಳೆಗಾರನಾದರೂ ಸಕಲ ಕಲಾ ವಲ್ಲಭ. ಪ್ರಸ್ತುತ ಚಿತ್ರದಲ್ಲಿ ಬಳೆಗಾರನ ಪಾತ್ರ ನಿರ್ವಹಿಸುತ್ತಿರುವ ನಾಯಕ ಶಿವರಾಜಕುಮಾರ್, ನಾಯಕಿ ನವ್ಯಾ ನಾಯರ್ ಜೊತೆಗೆ ಊರ ಶ್ರೀಮಂತನ ಮಗಳ ಮದುವೆಗೆ ಆಗಮಿಸುತ್ತಾರೆ.

ಮದುವೆ ಕಾರ್ಯ ನೆರವೇರುತ್ತಿದ್ದ ಶುಭಗಳಿಗೆಯಲ್ಲಿ ಬಳೆಗಾರನ ಕಂಡ ಶ್ರೀಮಂತನ ಮಡದಿ ಹಾಡು ಹೇಳುವಂತೆ ಒತ್ತಾಯಿಸುತ್ತಾರೆ. ಒತ್ತಾಯಕ್ಕೆ ಮಣಿದ ಬಳೆಗಾರ ಸಾಹಿತಿ ಕವಿರಾಜ್ ರಚಿಸಿರುವ 'ಮದುಮಗಳು ಚೆಲುವೆ ಚಂದ್ರಮುಖಿ ಕಳಕಳ ಕಂಗಳಲ್ಲಿ ಮಿನುಗೋ ಜಂ ಜಮುಕಿ' ಗೀತೆಯನ್ನು ಹಾಡಿ ನೆರೆದವರನ್ನು ರಂಜಿಸುತ್ತಾರೆ.

ಸಾಹುಕಾರನ ಮಗಳ ಮದುವೆ ಅಂದ ಮೇಲೆ ಸಿರಿವಂತಿಕೆಗೆ ಬರವೇ? ಹಾಡಿನ ಶ್ರೀಮಂತಿಕೆಗೆ ಕೊಂಚ ದಕ್ಕೆ ಬಾರದ ಹಾಗೆ ನಿರ್ಮಾಪಕರು ಹಣ ವ್ಯಯಿಸಿದ್ದಾರೆ. ಡಿ.ಟಿ.ಜಯಕುಮಾರ್ ಹೌಸ್‌ನಲ್ಲಿ ಚಿತ್ರೀಕೃತವಾದ ಈ ಗೀತೆಗೆ ತಾರಾ ಅವರು ನೃತ್ಯ ಸಂಯೋಜಿಸಿದ್ದಾರೆ. ಮುನ್ನೂರಕ್ಕೂ ಅಧಿಕ ಸಹ ಕಲಾವಿದರು ಹಾಗೂ ನೃತ್ಯಗಾರರು ಈ ವೈಭವೋಪೇತ ಗೀತೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ನಿರ್ಮಾಪಕ ರಮೇಶ್ ಕಶ್ಯಪ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರೇಷ್ಮೆ ನಗರದಲ್ಲಿ ಭಾಗ್ಯದ ಬಳೆಗಾರನ ಸಂಚಾರ
ಭಾಗ್ಯದ ಬಳೆಗಾರನಾಗಿ ಶಿವರಾಜ್ ಕುಮಾರ್
ಶಿವಣ್ಣ 'ಬಳೆಗಾರ'ನ ಹಾಡುಗಳ ದಿಬ್ಬಣ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada