»   »  ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ

ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ

Subscribe to Filmibeat Kannada
ಕನ್ನಡ ಚಲನಚಿತ್ರ ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರ ಒಕ್ಕೂಟವು ಹಮ್ಮಿಕೊಂಡಿರುವ ಒಂದು ವಾರ ಕಾಲದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸೋಮವಾರ ಚಾಲನೆ ನೀಡಿದರು. ಒಕ್ಕೂಟದ ಅಧ್ಯಕ್ಷ, ನಟ ಅಶೋಕ್ ಸೇರಿದಂತೆ ಕೆಸಿಎನ್ ಚಂದ್ರಶೇಖರ್, ಡಾ.ಜಯಮಾಲಾ, ಸಾ.ರಾ.ಗೋವಿಂದು, ಥಾಮಸ್ ಡಿ ಸೋಜಾ, ರಾಘವೇಂದ್ರ ರಾಜ್ ಕುಮಾರ್ ಅವರು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಪುಣ್ಯಭೂಮಿಗೆ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ತಾಯಿ ಭುವನೇಶ್ವರಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅಮೃತ ಮಹೋತ್ಸವಕ್ಕೆ ಪ್ರಚಾರ ನೀಡಲು ಸ್ತಬ್ಧಚಿತ್ರವೊಂದನ್ನು ಅನಾವರಣ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಗೆ ಆಸ್ಕರ್ ಸಿಕ್ಕ ಖುಷಿಯನ್ನು ಇಲ್ಲೂ ಹಂಚಿಕೊಳ್ಳಲಾಯಿತು. ರೆಹಮಾನ್ ಕನ್ನಡ ಚಿತ್ರರಂಗದಲ್ಲಿದ್ದ ದಿನಗಳನ್ನು ಸ್ಮರಿಸಲಾಯಿತು.

ಡಾ.ರಾಜ್ ಪುಣ್ಯಭೂಮಿಯಲ್ಲಿ ಫೆಬ್ರವರಿ 28ರವರೆಗೆ ನಾಟಕ, ನೃತ್ಯ, ಸಂಗೀತ, ಸಾಹಸ ಮತ್ತು ಹಾಸ್ಯ ಕಾರ್ಯಕ್ರಮಗಳು ನಡೆಯಲಿವೆ. ಚಿತ್ರರಂಗದ ನಟ-ನಟಿಯರು, ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರು ಕಾರ್ಯಕ್ರಮ ನೀಡಲಿದ್ದಾರೆ. ಡಾ.ರಾಜ್ ಅಭಿನಯಿಸಿರುವ 75 ಪ್ರಮುಖ ಪಾತ್ರಗಳ ವೇಷಧಾರಿ ಕಲಾವಿದರು, ಜಾನಪದ ಮೇಳಗಳು ಪುಣ್ಯಭೂಮಿಯಿಂದ ಅರಮನೆ ಮೈದಾನಕ್ಕೆ ಮಾರ್ಚ್ 1ರಂದು ಮೆರವಣಿಗೆಯಲ್ಲಿ ತೆರಳಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ
ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada