»   » ಚಿತ್ರ ನಿರ್ದೇಶಕ ದಯಾಳ್ ಗೆ ಭರ್ಜರಿ ಛಾನ್ಸ್

ಚಿತ್ರ ನಿರ್ದೇಶಕ ದಯಾಳ್ ಗೆ ಭರ್ಜರಿ ಛಾನ್ಸ್

Posted By:
Subscribe to Filmibeat Kannada

'ಸರ್ಕಸ್' ಮತ್ತು 'ಶ್ರೀ ಹರಿಕಥೆ' ಚಿತ್ರಗಳ ಹರಿಕಾರ ದಯಾಳ್ ಪದ್ಮನಾಭನ್ ಗೆ ಭರ್ಜರಿ ಅವಕಾಶ ಸಿಕ್ಕಿದೆ. ಖ್ಯಾತ ನಟ ಪ್ರಕಾಶ್ ರೈಗೆ ಚಿತ್ರಕ್ಕೆ ದಯಾಳ್ ಆಕ್ಷನ್, ಕಟ್ ಹೇಳಲಿದ್ದಾರೆ. ದಯಾಳ್ ಮತ್ತು ರೈ ಕಾಂಬಿನೇಷನ್ ಚಿತ್ರ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ.

ಹಾಸ್ಯ ಮತ್ತು ಸಾಹಸಭರಿತ ಚಿತ್ರ ಇದಾಗಿದ್ದು ಎಲ್ಲ ಅಂದುಕೊಂಡಂತೆ ನಡೆದರೆ ಚಿತ್ರ ಇದೇ ಡಿಸೆಂಬರ್ ಗೆ ತೆರೆ ಕಾಣಲಿದೆ. ಪ್ರಕಾಶ್ ರೈ ಜೊತೆ ಚಿತ್ರ ಮಾಡುತ್ತಿರುವುದಕ್ಕೆ ತುಂಬ ಸಂತಸವಾಗಿದೆ ಎಂದು ದಯಾಳ್ ಪ್ರತಿಕ್ರಿಯಿಸಿದ್ದಾರೆ. ಚಿತ್ರದ ತಾಂತ್ರಿಕ ಬಳಗ ಹಾಗೂ ತಾರಾಬಳಗದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.

ನಿರ್ದೇಶಕ ದಯಾಳ್ ಪದ್ಮನಾಭನ್ ಅವರ 'ಸರ್ಕಸ್' ಚಿತ್ರ ಸೆಟ್ಟೇರಿದಾಗ ಚಿತ್ರೋದ್ಯಮದಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಆದರೆ ಸರ್ಕಸ್ ಚಿತ್ರಬಿಡುಗಡೆಯಾಗಿಬಾಕ್ಸಾಫೀಸ್ ನಲ್ಲಿ ಮಕಾಡೆ ಮಲಗಿದ ನಂತರ ನಟ ಗಣೇಶ್ ಸೇರಿದಂತೆ ದಯಾಳ್ ಆಘಾತ ಅನುಭವಿಸಿದ್ದರು. ಪ್ರಕಾಶ್ ರೈ ಜೊತೆಗಿನ ಚಿತ್ರ ಹಾಗೆ ಆಗದಿರಲಿ ಎಂದು ಹಾರೈಸೋಣ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada