»   » ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜ್ ಕಾರ್ಯಕ್ರಮ

ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜ್ ಕಾರ್ಯಕ್ರಮ

Posted By:
Subscribe to Filmibeat Kannada

ರಂಗಭೂಮಿಯಿಂದ ಕಲಾಸೇವೆ ಆರಂಭಿಸಿದ ಡಾ.ರಾಜ್ ಸಮಾಜದ ಎಲ್ಲ ಸ್ತರಗಳ ಕಲಾಭಿಮಾನಿಗಳ ಮನಸೂರೆಗೊಂಡ ಮಹಾನ್ ಕಲಾವಿದ. ವಿನಯವೇ ತಮ್ಮ ನಡೆ ನುಡಿಯ ಉಸಿರಾಗಿಸಿಕೊಂಡಿದ್ದ ರಾಜ್ ಕುಮಾರ್ ಅತ್ಯಂತ ಮುಗ್ಧ ಮತ್ತು ಸರಳಜೀವಿ.

ಇಂದು (ಏ.24) ಅವರ 84ನೇ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕ ಸರ್ಕಾರವೂ ರಾಜ್ ಹುಟ್ಟುಹಬ್ಬ ನಿಮಿತ್ತ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ರಾಜ್ ಅವರ ಮನೋಜ್ಞ ಅಭಿನಯದ ಚಿತ್ರಗಳ ದೃಶ್ಯಾವಳಿಗಳ ಪ್ರದರ್ಶನ, ಚಲನಚಿತ್ರ ಗೀತೆಗಳ ಗಾಯನ ಮತ್ತು ಜನಪ್ರಿಯ ಗೀತೆಗಳ ನೃತ್ಯ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಉದ್ಘಾಟಿಸಲಿದ್ದಾರೆ.

ನವರಸ ನಾಯಕ ಜಗ್ಗೇಶ್, ಮುಖ್ಯಮಂತ್ರಿ ಚಂದ್ರು, ಶ್ರೀನಾಥ್, ದೊಡ್ಡರಂಗೇಗೌಡ, ಎಂ ರುದ್ರೇಶ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಯು.ಆರ್.ಅನಂತಮೂರ್ತಿ, ಪಾರ್ವತಮ್ಮ ರಾಜ್ ಕುಮಾರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧಾ, ಫಿಲಂ ಚೇಂಬರ್ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಕಾರ್ಯಕ್ರಮದ ಮುಖ್ಯ ಅತಿಥಿಗಳು. (ಒನ್‌ಇಂಡಿಯಾ ಕನ್ನಡ)

English summary
Several Kannada organisations celebrating late veteran Kannada actor Dr Rajkumar's 84th birthday in Bangalore on Tuesday, April 24. The Karnataka Government also planned to celebrate Annavara birthday in a special way by organising a grand function at Jnanajyothi Auditorium, Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada