»   » ಸೂರಿ ನಿರ್ದೇಶನದಲ್ಲಿ ಪುನೀತ್ ಮತ್ತೊಂದು ಚಿತ್ರ

ಸೂರಿ ನಿರ್ದೇಶನದಲ್ಲಿ ಪುನೀತ್ ಮತ್ತೊಂದು ಚಿತ್ರ

Posted By:
Subscribe to Filmibeat Kannada

'ಜಾಕಿ' ಚಿತ್ರದ ಭರ್ಜರಿ ಯಶಸ್ಸು ಪವರ್ ಸ್ಟಾರ್ ಪುನೀತ್ ರಾಜ್‌‍ಕುಮಾರ್ ಮತ್ತು ನಿರ್ದೇಶಕ ದುನಿಯಾ ಸೂರಿ ಅವರನ್ನು ಮತ್ತೆ ಒಂದಾಗಿಸಿದೆ. ಈಗ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರ ಬರಲಿದೆ. ವಜ್ರೇಶ್ವರಿ ಕಂಬೈನ್ಸ್ ಬ್ಯಾನರಿನಲ್ಲಿ ಈ ಚಿತ್ರ ಮೂಡಿಬರುತ್ತಿರುವುದು ವಿಶೇಷ.

ಅಣ್ಣಾವ್ರ ಕುಟುಂಬದ ಬ್ಯಾನರ್‌ನಲ್ಲಿ ಚಿತ್ರ ಮಾಡಬೇಕೆಂದು ಪ್ರತಿಯೊಬ್ಬ ನಿರ್ದೇಶಕನೂ ಕನಸು ಕಾಣುತ್ತಿರುತ್ತಾನೆ. ಅಂತಹ ಅಪೂರ್ವ ಅವಕಾಶ ನಿರ್ದೇಶಕ ಸೂರಿ ಅವರನ್ನು ಮತ್ತೊಮ್ಮೆ ಹುಡುಕಿಕೊಂಡು ಬಂದಿದೆ. ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ಚಿತ್ರಗಳೆಂದರೆ ಸದಭಿರುಚಿಯ ಚಿತ್ರಗಳಿಗೆ ಹೆಸರಾದ ಸಂಸ್ಥೆ ಎಂಬ ಮಾತಿದೆ. ಈ ಮಾತಿಗೆ ತಕ್ಕಂತೆ ಚಿತ್ರ ಮೂಡಿಬರಲಿದೆ ಎಂಬ ಮಾತುಗಳು ಕೇಳಿಬಂದಿವೆ.

ವಿಶ್ವಸನೀಯ ಮೂಲಗಳ ಪ್ರಕಾರ, ಸೋಮವಾರ (ನ.22) ಸೂರಿ ಅಡ್ವಾನ್ಸ್ ಪಡೆದಿದ್ದಾರೆ. ಯೋಗರಾಜ್ ಭಟ್ಟರ ಚಿತ್ರದ ಬಳಿಕ ಸೂರಿ ಚಿತ್ರ ಸೆಟ್ಟೇರಲಿದೆ. ಸದ್ಯಕ್ಕೆ ಪುನೀತ್ ರಾಜ್ ಕುಮಾರ್ ಅವರು 'ಹುಡುಗ್ರು'(ನಾಡೋಡಿಗಳ್ ರೀಮೇಕ್) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಜಾಕಿ' ಚಿತ್ರದ ಬಹುತೇಕ ತಂತ್ರಜ್ಞರು ಸೂರಿ ನಿರ್ದೇಶಿಸಲಿರುವ ಚಿತ್ರದಲ್ಲೂ ಇರುತ್ತಾರೆ.

ವಿ ಹರಿಕೃಷ್ಣ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಹೊಸ ಚಿತ್ರದಲ್ಲಿ ಮುಂದುವರಿಯಲಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರಗಳ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ.
ಏತನ್ಮಧ್ಯೆ 'ಜಾಕಿ' ಚಿತ್ರ ಅರ್ಧ ಶತಕದತ್ತ ಮುನ್ನಡೆದಿದೆ. ಬಾಕ್ಸಾಫೀಸ್ ಗಳಿಕೆಯಲ್ಲೂ 'ಜಾಕಿ' ಭರ್ಜರಿ ಸದ್ದು ಮಾಡುತ್ತಿದೆ.

English summary
Duniya Suri again to direct Power Star Puneet Rajkumar. The name of film is yet to be decided. Sources says that, almost "Jackie" team combines together in this film which is producing on the banner of Sri Vajreshwari Combines.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada