»   »  ತೆಲುಗುಖ್ಯಾತ ನಿರ್ದೇಶಕ ಗೀತಾಕೃಷ್ಣರಿಂದ ಕನ್ನಡ ಚಿತ್ರ

ತೆಲುಗುಖ್ಯಾತ ನಿರ್ದೇಶಕ ಗೀತಾಕೃಷ್ಣರಿಂದ ಕನ್ನಡ ಚಿತ್ರ

Posted By:
Subscribe to Filmibeat Kannada
Telugu film director Geetha Krishna
ತೆಲುಗು ಚಿತ್ರ ನಿರ್ದೇಶಕ ಎ ಎಸ್ ಗೀತಾಕೃಷ್ಣ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಚಿತ್ರ ತಯಾರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ತೆಲುಗಿನಲ್ಲಿ ಅವರು ನಿರ್ದೇಶಿಸಿದ್ದ'ಕೋಕಿಲ' ಮತ್ತ್ತು 'ಕೀಚುರಾಳ್ಳು' ಎಂಬ ಚಿತ್ರಗಳು ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ್ದವು.

ತೆಲುಗಿನಲ್ಲಿ 'ಕಾಫಿ ಬಾರ್' ಎಂದು ತಮಿಳಿನಲ್ಲಿ 'ನಿಮಿಡಂಗಳ್' ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಕನ್ನಡ ಚಿತ್ರ ಇನ್ನೂ ನಾಮಕರಣಗೊಂಡಿಲ್ಲ. ಏಪ್ರಿಲ್ ಕೊನೆಗೆ ಚಿತ್ರ ಸೆಟ್ಟೇರಲಿದೆ. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಳ್ಳಲಿರುವ ಚಿತ್ರದ ತಾರಾಬಳಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ನಿರ್ದೇಶನ ಮತ್ತು ನಿರ್ಮಾಣ ಹೀಗೆ ಸಮಸ್ತ ಜವಾಬ್ದಾರಿಗಳನ್ನು ಗೀತಾಕೃಷ್ಣ ಅವರೇ ನಿಭಾಯಿಸಲಿದ್ದಾರೆ.

ಕನ್ನಡಿಗ ಮುರಳಿ ಮತ್ತು ಎಂ ವಿ ರಘು ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ. ಚಿತ್ರದ ವಿತರಣೆ ಹಕ್ಕುಗಳನ್ನು ಆಡ್ ಲ್ಯಾಬ್ಸ್ ಪಡೆದುಕೊಂಡಿದೆ. ಗಿರೀಶ್ ಕಾರ್ನಾಡ್, ತಾರಾ ನಟಿಸಿದ್ದ 'ಸಂಕೀರ್ತನಾ' ಚಿತ್ರಕ್ಕೆ ಗೀತಾಕೃಷ್ಣ ಅವರು ಆಂಧ್ರಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದಿದ್ದರು.ಅಂದಹಾಗೆ ಈ ಚಿತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ರೆಡ್ ಒನ್ ಡಿಜಿಟಲ್ ಕ್ಯಾಮೆರಾವನ್ನು ಬಳಸಲಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಪ್ರೇಮ್ ಕಹಾನಿ ಹಿಂದಿ ಶೀರ್ಷಿಕೆ ಬಗ್ಗೆ ಆಕ್ಷೇಪ
ಸರೋಜ್ ಖಾನ್‌ಗೆ ಏಕೋ ಮುನಿಸು
ತಾರೆ ಜಮೀನ್ ಪರ್ ಡಬ್ಬಿಂಗ್ ಕೈಬಿಟ್ಟ ಸರ್ಕಾರ
ಸಂಗೀತ ನಿರ್ದೇಶಕರಿಗೆ ಲಹರಿ ವೇಲು ಛೀಮಾರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada