»   »  ಮೂರು ರಾಜ್ಯಗಳಲ್ಲಿ 'ಕೃಷ್ಣನ್ ಲವ್ ಸ್ಟೋರಿ'

ಮೂರು ರಾಜ್ಯಗಳಲ್ಲಿ 'ಕೃಷ್ಣನ್ ಲವ್ ಸ್ಟೋರಿ'

Subscribe to Filmibeat Kannada

ಶ್ರೀವೆಂಕಟೇಶ್ವರ ಕೃಪಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಹಾಗೂ ಮೋಹನ್ ಜಿ ನಾಯಕ್ ನಿರ್ಮಿಸುತ್ತಿರುವ 'ಕೃಷ್ಣನ್ ಲವ್ ಸ್ಟೋರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಸಾಗರ, ಕುಮುಟಾ, ಮಿರ್ ಜಾನ್ ಫೋರ್ಟ್ ಹಾಗೂ ಉಡುಪಿಗಳಲ್ಲಿ ಚಿತ್ರೀಕರಣ ನಡೆಸುವ ಚಿತ್ರತಂಡ 14ದಿನಗಳ ಕಾಲ ಮಂಜಿನ ನಗರ ಮಡಿಕೇರಿಯಲ್ಲಿ ನೆಲೆಯೂರಲಿದೆ.

ಅಲ್ಲಿ ಅಜಯ್ ಹಾಗೂ ರಾಧಿಕಾ ಪಂಡಿತ್ ಅಭಿನಯದಲ್ಲಿ ಹಾಡು ಹಾಗೂ ಕೆಲವು ಭಾಗದ ಚಿತ್ರೀಕರಣ ನಡೆಯಲಿದ್ದು, ಅಲ್ಲಿಂದ ಶಿಂಷಾ ಮಾರ್ಗವಾಗಿ ಚಿತ್ರತಂಡ ಕೇರಳ ಮತ್ತು ತಮಿಳುನಾಡಿನ ಹೊಗೆನಕಲ್ ಜಲಪಾತದತ್ತ ತೆರಳಲಿದೆ ಎಂದು ತಿಳಿಸಿದ ನಿರ್ಮಾಪಕರು ನಮ್ಮ ಚಿತ್ರಕ್ಕೆ ದಕ್ಷಿಣದ ಮೂರು ರಾಜ್ಯಗಳಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ.

'ಸಿಕ್ಸರ್' ಚಿತ್ರದ ಮೂಲಕ ನಿರ್ದೇಶಕರಾಗಿ, 'ಮೊಗ್ಗಿನ ಮನಸು' ಚಿತ್ರಕ್ಕೆ ಫಿಲಂ ಪೇರ್ ಪ್ರಶಸ್ತಿ ಪಡೆದು ಖ್ಯಾತರಾಗಿರುವ ಶಶಾಂಕ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿ.ಶ್ರೀಧರ್ ಸಂಗೀತವಿರುವ 'ಕೃಷ್ಣನ್ ಲವ್ ಸ್ಟೋರಿ'ಗೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ.

ಕೆ.ಎಂ.ಪ್ರಕಾಶ್ ಸಂಕಲನ, ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ಶಶಾಂಕ್ ಗೀತರಚನೆ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲೆ ಚಂಪಕಧಾಮ ಬಾಬು ಮತ್ತು ಕುಮಾರ್ ನಿರ್ಮಾಣ ನಿರ್ವಹಣೆಯಿದೆ. ಈ ಚಿತ್ರದಲ್ಲಿ ಅಜಯ್- ರಾಧಿಕಾ ಪಂಡಿತ್ ನಾಯಕ/ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಸಿ.ಎಚ್.ಸುರೇಶ್ ಹಾಗೂ ಸಿ.ಲೋಕೇಶ್ ಸಹ ನಿರ್ಮಾಪಕರಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada