»   » ಅಬ್ಬಬ್ಬಾ ಎನಿಸುವ ಅಣ್ಣಾ ಬಾಂಡ್ ಭರ್ಜರಿ ಫೈಟ್ಸ್

ಅಬ್ಬಬ್ಬಾ ಎನಿಸುವ ಅಣ್ಣಾ ಬಾಂಡ್ ಭರ್ಜರಿ ಫೈಟ್ಸ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ಚಿತ್ರ ಅಣ್ಣಾ ಬಾಂಡ್ ಅಂತಿಮ ಹಂತದ ಚಿತ್ರೀಕರಣದಲ್ಲಿದೆ. ಈ ಚಿತ್ರದ ಫೈಟಿಂಗ್ ದೃಶ್ಯಗಳ ಕೆಲವು ಸ್ಟಿಲ್ ಗಳು ಅಲ್ಲಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೋಡಿದರೆ ಯಾವುದೋ ಹಾಲಿವುಡ್ ಚಿತ್ರದ ಹೊಡೆದಾಟವನ್ನು ನೋಡಿದಂತೆ ಭಾಸವಾಗುತ್ತದೆ. ಪುನೀತ್ ಸಾಕ್ಷಾತ್ ಚಿರತೆಯಂತೆ ಫೈಟಿಂಗ್ ಮಾಡುತ್ತಿದ್ದಾರೆ.

ಅಣ್ಣಾ ಬಾಂಡ್ ಹೇಳಿಕೇಳಿ ಸೂರಿಯ ಆಕ್ಷನ್ ಚಿತ್ರ. ಅದೆಲ್ಲೆಲ್ಲಿಂದ ಬಂದಿದ್ದಾರೋ ಸಾಹಸ ಕಲಾವಿದರು! ಒಟ್ಟಿನಲ್ಲಿ ಮೈ ನವಿರೇಳಿಸುವ ಸಾಹಸ ದೃಶ್ಯಗಳು ಸಾಕಷ್ಟು ಪ್ಲಸ್ ಇನ್ನೊಂದಿಷ್ಟಿದೆಯಂತೆ ಈ ಅಣ್ಣಾ ಬಾಂಡ್ ಚಿತ್ರದಲ್ಲಿ. ಪುನೀತ್ ಅಭಿಮಾನಿಗಳು ದಿಲ್ ಖುಷ್ ಆಗೋದಕ್ಕೆ ಇಷ್ಟು ಸಾಕು. ಸಿನಿಪ್ರೇಕ್ಷಕರಿಗೆ ಒಂದೊಳ್ಳೆಯ ಸಿನಿಮಾ ಗ್ಯಾರಂಟಿ.

ಈ ಸ್ಟಿಲ್ಸ್ ಗಳನ್ನು ನೋಡುತ್ತಿದ್ದರೆ ಅಣ್ಣಾ ಬಾಂಡ್ ಸಂಪೂರ್ಣ ಆಕ್ಷನ್ ಬೇಸ್ಡ್ ಚಿತ್ರ ಎನಿಸುತ್ತದೆ. ಆದರೆ ಕಥೆಯ ಗುಟ್ಟು ಹಾಗಿರಲಿ, ಎಳೆಯ ಗುಟ್ಟೂ ಬಿಚ್ಚಿಡದ ಅಣ್ಣಾ ಬಾಂಡ್ ತಂಡ, ಈ ಚಿತ್ರವನ್ನು ಏಪ್ರಿಲ್ ನಲ್ಲಿ ತೆರೆಗೆ ತರಲು ಸಜ್ಜಾಗುತ್ತಿದೆ. ಪುನೀತ್ ಅಭಿಮಾನಿಗಳಿಗೆ ಈಗಾಗಲೇ ಹಬ್ಬ ಪ್ರಾರಂಭವಾಗಿದೆ ಅಂತ ಗಾಂಧಿನಗರದ ತುಂಬಾ ಗುಲ್ಲೋಗುಲ್ಲು...(ಒನ್ ಇಂಡಿಯಾ ಕನ್ನಡ)

English summary
Power Star Puneet Rajkumar's 'Anna Bond' movie stills looks like Hollywood style fighting scene. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada