Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಲುಗು ಚಿತ್ರದಲ್ಲಿ ರಾಧಿಕಾ; ರಹಸ್ಯ ಬಯಲಾಗಿದ್ದು ಹೀಗೆ
ತನ್ನ ಮದುವೆ, ಮಗು, ಸಂಸಾರದ ಬಗ್ಗೆ ಮೌನ ಮುರಿದಿದ್ದ ಕನ್ನಡ ನಟಿ ರಾಧಿಕಾ ಈಗ ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಅಭಿನಯಿಸುತ್ತಿರುವ ತೆಲುಗು ಚಿತ್ರದ ಹೆಸರು 'ದೇವತಲು' (ದೇವತೆಗಳು) ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
'ಅರುಂಧತಿ' ಎಂಬ ಮಾಯ, ಮಂತ್ರ ತಂತ್ರಗಳ ಚಿತ್ರವನ್ನು ನಿರ್ದೇಶಿಸಿದ್ದ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ದೇವತಲು ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಜಿ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಇದೊಂದು ಭಕ್ತಿ ಪ್ರಧಾನ ಚಿತ್ರವಾಗಿದ್ದು ಚಿತ್ರದ ಉಳಿದ ತಾರಾಬಳಗದಲ್ಲಿ ರಿಷಿ, ಭಾನುಪ್ರಿಯಾ, ಸತ್ಯ ಪ್ರಕಾಶ್ ಮುಂತಾದವರು ಅಭಿನಯಿಸುತ್ತಿದ್ದಾರೆ.
'ದೇವತಲು' ಚಿತ್ರದಲ್ಲಿ ರಾಧಿಕಾ ಅಭಿನಯಿಸುತ್ತಿದ್ದಾರೆ ಎಂಬ ರಹಸ್ಯ ಬಯಲಾಗಿದ್ದೇ ಒಂದು ಆಸಕ್ತಿಕರ ವಿಚಾರ. ಅದು ಹೇಗೆಂದರೆ, ಮೇಲುಕೋಟೆಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಬೆಳ್ಳಿ ಪರದೆ ಮೇಲೆ ತಂಗಿಯಾಗಿ ಎಲ್ಲರ ಮನಗೆದ್ದಿ ರಾಧಿಕಾರನ್ನು ಜನ ಇನ್ನೂ ಮರೆತಿರಲಿಲ್ಲ. ಮೇಲುಕೋಟೆಯಲ್ಲಿ ಆಕೆ ಕಾರು ಇಳಿದಿದ್ದೇ ತಡ ಜನ ಜಂಗುಳಿ ಸುತ್ತ್ತುವರೆಯಿತು.
ರಾಧಿಕಾರನ್ನು ಅದೂ ಇದೂ ಕೇಳಿ ಅಭಿಮಾನಿಗಳು ಸಂತಸಪಟ್ಟರು. ರಾಧಿಕಾ ಮೇಲುಕೋಟೆಯಲ್ಲಿರುವ ಸುದ್ದಿ ಆ ಕಿವಿಯಿಂದ ಈ ಕಿವಿಗೆ ಬಿದ್ದು ಕಡೆಗೆ ಹೇಗೋ ಸುದ್ದಿ ಮಾಧ್ಯಮಗಳ ಕಿವಿಗೆ ಬಿತ್ತು. ಇಲ್ಲದಿದ್ದರೆ ದೇವತಲು ಚಿತ್ರ ಬಿಡುಗಡೆಯಾವುವವರೆಗೂ ರಾಧಿಕಾ ಅಭಿನಯಿಸುತ್ತಿರುವ ಸುದ್ದಿ ಗುಟ್ಟಾಗಿಯೇ ಉಳಿಯುತ್ತಿತ್ತು.