»   »  ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಯೋಗೀಶನ ರಾವಣ

ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಯೋಗೀಶನ ರಾವಣ

Subscribe to Filmibeat Kannada
Yogish
ಓದೋ ವಯಸ್ಸಿನಲ್ಲಿ ಪ್ರೀತಿಗೆ ಶರಣಾದರೆ ವಿದ್ಯೆಗೆ ಮಂಗಳ ಹಾಡಿದಂತೆ, ಎಂದು ಬಲ್ಲವರು ಹೇಳುತ್ತಾರೆ. ಆದರೆ ಪ್ರೀತಿನೇ ಬೇರೆ, ವಿದ್ಯೆಯೇ ಬೇರೆ ಎಂದು 'ರಾವಣ'ನಂತವರು ತೋರುತ್ತಾರೆ. ಎಂಜಿನಿಯಂರಿಂಗ್ ವಿದ್ಯಾರ್ಥಿ 'ರಾವಣ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕಾಲೇಜಿಗೆ ಕೀರ್ತಿ ತಂದ ಹುಡುಗ.

ಆದರೆ ಪ್ರೀತಿ ಯಾರನ್ನು ಬಿಟ್ಟಿಲ್ಲ ಹೇಳಿ? ಕಡುಬಡವನಿಂದ ಧನಿಕನವರೆಗೂ, ಅವಿದ್ಯಾವಂತನಿಂದ ವಿದ್ಯಾವಂತನವರೆಗೂ ಎಲ್ಲರೂ ಪ್ರೀತಿಯ ಪಾಶಕ್ಕೆ ಒಳಗಾದವರೆ. 'ರಾವಣ ಪಾತ್ರಧಾರಿ ನಾಯಕ ಯೋಗೀಶ್ ಸಹ ಪ್ರೀತಿಯ ಬಲೆಯಲ್ಲಿ ಬಿದ್ದಿರುತ್ತಾರೆ. ಇವರು ಪ್ರೀತಿಸಿದ ಹುಡುಗಿಯನ್ನೇ ಸಂತೋಷ್ ಕೂಡ ಪ್ರೀತಿಸುತ್ತಿರುತ್ತಾರೆ.

ಸರಿ. ಒಂದು ಹುಡುಗಿಗೆ ಇಬ್ಬರು ಪ್ರೇಮಿಗಳು ಎಂದ ಮೇಲೆ ಕೇಳಬೇಕೆ? ನಡೆಯುತ್ತದೆ ಅವರಿಬ್ಬರ ನಡುವ ಭೀಕರ ಮಾರಾಮಾರಿ. ಇದು ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವೂ ಹೌದು. ಸಾಹಸ ನಿರ್ದೇಶಕ ರವಿವರ್ಮ ಅವರ ಉಸ್ತುವಾರಿಯಲ್ಲಿ ನಡೆದ ಈ ಸಾಹಸ ಸನ್ನಿವೇಶ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಚಿತ್ರೀಕೃತವಾಯಿತು. ನಾಯಕ ಯೋಗೀಶ್ ಹಾಗೂ ಸಂತೋಷ್ ಸೇರಿದಂತೆ ಸಹ ಕಲಾವಿದರು ಈ ಸನ್ನಿವೇಶದಲ್ಲಿ ಭಾಗವಹಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ
ಕೆಂಗೇರಿ ಗಾಂಧಿ ಆಶ್ರಮಕ್ಕೆ ರಾವಣನ ಭೇಟಿ
ಸಂಚಿತಾ ಪಡುಕೋಣೆ ಮೋಹಕ ಚಿತ್ರಪಟಗಳು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada