For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣದಲ್ಲಿ ನಟ ಅಭಿಜಿತ್ ತಲೆ, ಮೈಕೈಗೆ ಪೆಟ್ಟು

  By Rajendra
  |

  ಅದು 'ವಿಷ್ಣು' ಚಿತ್ರದ ಕ್ಲೈಮ್ಯಾಕ್ಸ್ ಸೀನ್. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿತ್ತು.ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಆಕ್ಷನ್ ಹೇಳುತ್ತಿದ್ದಂತೆ ನಟ ಅಭಿಜಿತ್ ಗ್ಲಾಸ್ ಬ್ರೇಕ್ ಮಾಡಬೇಕು. ಯಾವುದೇ ಡ್ಯೂಪ್ ಇಲ್ಲದೆ ಸ್ವತಃ ಅಭಿಜಿತ್ ಗ್ಲಾಸ್ ಪುಡಿಗಟ್ಟಲು ಮಾಡಿದ ಸಾಹಸ ಸನ್ನಿವೇಶದಲ್ಲಿ ಅವರು ಗಾಯಗೊಂಡರು.

  ಕೂಡಲೆ ಕಟ್ ಹೇಳಿದ ಥ್ರಿಲ್ಲರ್ ಮಂಜು, ಬಂದು ನೋಡಿದರೆ ಅಭಿಜಿತ್ ಕೈಗೆ ಗಾಯವಾಗಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಸಾಹಸ ಸನ್ನಿವೇಶಕ್ಕೆ ನಿಂತರು. ಮತ್ತೊಮ್ಮೆ ಥ್ರಿಲ್ಲರ್ ಮಂಜು ಆಕ್ಷನ್ ಹೇಳಿದಾಗ, ಈಗ ಗ್ಲಾಸ್ ಬ್ರೇಕ್ ಜೊತೆಗೆ ಸ್ಫೋಟದ ದೃಶ್ಯವೂ ಇತ್ತು. ಒಂದು ಕ್ಷಣ ಮುಂಚಿತವಾಗಿ ಗ್ಲಾಸ್ ಮೇಲೆ ಅಭಿಜಿತ್ ಬಿದ್ದ ಕಾರಣ, ಅವರ ತಲೆಗೆ, ಮೈಕೈಗೆ ತರಚಿದ ಗಾಯಗಳಾದವು.

  ಕೂಡಲೆ ಚೇತರಿಸಿಕೊಂಡ ಅವರು ಮತ್ತೆ ಚಿತ್ರೀಕರಣಕ್ಕೆ ಅಣಿಯಾದರು. ಚಿತ್ರೀಕರಣದಲ್ಲಿ ಆಶಿಶ್ ವಿದ್ಯಾರ್ಥಿ, ಶಾರತ್ ಲೋಹಿತಾಶ್ವ ಮತ್ತಿತರ ಕಲಾವಿದರು ಪಾಲ್ಗೊಂಡಿದ್ದರು. ವಿಷ್ಣು ಚಿತ್ರವನ್ನು ರೋಹಿಣಿ ಅಭಿಜಿತ್ ನಿರ್ಮಿಸುತ್ತಿದ್ದು, ತಾರಾಬಳಗದಲ್ಲಿ ಬುಲೆಟ್ ಪ್ರಕಾಶ್, ರವಿಶಂಕರ್ ಮುಂತಾದವರಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Kannada actor Abhijit met with an accident while shooting for the film Vishnu at Peenya Industrial area on Tuesday. Abhijit was performing an action sequence where he had to breaking a glass. He reportedly sustained injuries on his head, hands and body.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X