»   » ಸಪ್ತ ಭಾಷಾ ತಾರೆ ರಂಭಾಗೆ ಸಪ್ತಪದಿ!

ಸಪ್ತ ಭಾಷಾ ತಾರೆ ರಂಭಾಗೆ ಸಪ್ತಪದಿ!

Subscribe to Filmibeat Kannada

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಭೋಜ್ ಪುರಿ ಸಪ್ತ ಭಾಷಾ ತಾರೆ ರಂಭಾಗೆ ಕಂಕಣ ಬಲ ಕೂಡಿಬಂದಿದೆ. ಶೀಘ್ರದಲ್ಲೇ ಆಕೆ ಹಸೆಮಣೆ ಏರಲಿದ್ದು ಸಪ್ತಪದಿ ತುಳಿಯಲಿದ್ದಾರೆ. ಕನ್ನಡದ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡು ರಂಗ ವಿಠಲ, ಬಾವ ಬಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ರಂಭಾ ನಟಿಸಿದ್ದಾರೆ.

ಗ್ಲಾಮರಸ್ ಪಾತ್ರಗಳಿಗೆ ಹೆಸರಾಗಿದ್ದ ರಂಭಾ ಕಡೆಗೂ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ. ಕೆನಡ ಮೂಲದ ಪ್ರಭಾವಿ ಯುವಉದ್ಯಮಿ ಇಂದಿರನ್ ಕೈಹಿಡಿಯುವುದು ಖಚಿತವಾಗಿದೆ ಎನ್ನುತ್ತವೆ ಮೂಲಗಳು. ಇಂದಿರನ್ ಅವರು ಅಂತಾರಾಷ್ಟ್ರೀಯ ನೈರ್ಮಲ್ಯ ವಸ್ತುಗಳ ಉತ್ಪಾದನಾ ಸಂಸ್ಥೆ ಮ್ಯಾಜಿಕ್ ವುಡ್ಸ್ ಮಾಲೀಕ. ಈ ಯುವ ಉದ್ಯಮಿ ಇತ್ತೀಚೆಗೆ ತಮ್ಮ ಉತ್ಪನ್ನಗಳ ರಾಯಭಾರಿಯಾಗಿರುವ ನಟಿ ರಂಭಾ ಅವರಿಗೆ ಐಶಾರಾಮಿ ಬಿಎಂಡಬ್ಲ್ಯು ಕಾರನ್ನು ಕೊಡುಗೆಯಾಗಿ ನೀಡಿ ಸುದ್ದಿ ಮಾಡಿದ್ದ.

ತಮ್ಮ ಮದುವೆ ವಿಷಯವನ್ನು ರಂಭಾ ಆಗಲಿ ಅಥವಾ ಅವರ ಮನೆಯವರಾಗಲಿ ಖಚಿತಪಡಿಸಿಲ್ಲ. ರಂಭಾ ಮದುವೆ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಆದರೆ ನಟಿ ರಂಭಾ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದಿರನ್ ಅವರನ್ನುಡಿಸೆಂಬರ್ 27ರಂದು ಮದುವೆಯಾಗಲಿದ್ದಾರೆ ಎಂದು ಮಾಧ್ಯಮ ವರದಿಗಳು ಸ್ಪಷ್ಟಪಡಿಸಿವೆ.

ಸ್ವರ್ಗಾಧಿಪತಿ ಇಂದ್ರನ ಉದ್ಯಾನ ನಂದನವನದಲ್ಲಿ ರಂಭೆ, ಮೇನಕೆ ಮತ್ತು ಊರ್ವಶಿಯರ ಕತೆ ಬಿಡಿ ಭೂಲೋಕದ ರಂಭೆಗೂ ಇಂದಿರನ್ ಸಿಗುತ್ತಿರುವುದು ವಿಶೇಷವಲ್ಲವೆ?! ರಂಭಾ ಮದುವೆ ಬರೀ ಗುಮಾನಿಯಾಗದಿರಲಿ ಎಂದು ಆಶಿಸೋಣ ಅಲ್ಲವೆ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada