»   » ಮೋಹಕ ತಾರೆ ಸಾಕ್ಷಿ ಶಿವಾನಂದ್ ಕನ್ನಡಕ್ಕೆ ರೀ ಎಂಟ್ರಿ

ಮೋಹಕ ತಾರೆ ಸಾಕ್ಷಿ ಶಿವಾನಂದ್ ಕನ್ನಡಕ್ಕೆ ರೀ ಎಂಟ್ರಿ

Posted By:
Subscribe to Filmibeat Kannada

ಕರ್ನಾಟಕ ಮೂಲದ ಮೋಹಕ ತಾರೆ ಸಾಕ್ಷಿ ಶಿವಾನಂದ್ ಮತ್ತೆ ತವರಿಗೆ ಬಂದಿದ್ದಾರೆ. ಈ ಹಿಂದೆ ಸೈನಿಕ, ನಾನು ನಾನೆ, ತಂದೆಗೆ ತಕ್ಕ ಮಗ, ಗಲಾಟೆ ಅಳಿಯಂದ್ರು ಚಿತ್ರಗಳಲ್ಲಿ ಸಾಕ್ಷಿ ಅಭಿನಯಿಸಿದ್ದರು. ಅದಾದ ಬಳಿಕ ಆಕೆ ನಾಪತ್ತೆಯಾಗಿದ್ದರು. ಈಗ ಮತ್ತೆ ಈಕೆಯನ್ನು ಕನ್ನಡ ಬೆಳ್ಳೆಪರದೆಗೆ ಕರೆತಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.

ಕನಸುಗಾರ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ 'ಪರಮಶಿವ' ಚಿತ್ರಕ್ಕೆ ಸಹಿಹಾಕುವ ಮೂಲಕ ಸಾಕ್ಷಿ ಎರಡನೆ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಣಜಿ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಗಸ್ಟ್ 1ರಿಂದ 'ಪರಮಶಿವ' ಚಿತ್ರೀಕರಣದಲ್ಲಿ ಸಾಕ್ಷಿ ಪಾಲ್ಗೊಳ್ಳಲಿದ್ದಾರೆ.

'ಪರಮಶಿವ' ಚಿತ್ರ ನವರಸಭರಿತವಾಗಿದ್ದು ಮನರಂಜನೆ, ಸೆಂಟಿಮೆಂಟು ಹಾಗೂ ಹಾಸ್ಯಮಯವಾಗಿದೆ ಎನ್ನುತ್ತಾರೆ ಅಣಜಿ. ಕ್ರೇಜಿಸ್ಟಾರ್ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡದಂತೆ ಚಿತ್ರವನ್ನು ತೆರೆಗೆ ತರಲಾಗುತ್ತಿರುವ ಭರವಸೆಯನ್ನು ಅವರು ನೀಡಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Actress Sakshi Shivanand , who has earlier acted in several Kannada films now she is back again to the Kannada film Paramashiva with Crazy Star Ravichandran. which is being produced by Anaji Nagaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada