»   » ಮಾನವೀಯತೆ ಮೆರೆದ ಕಲಾಸಾಮ್ರಾಟ್ ನಾರಾಯಣ್

ಮಾನವೀಯತೆ ಮೆರೆದ ಕಲಾಸಾಮ್ರಾಟ್ ನಾರಾಯಣ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಅಂಧ ಮಕ್ಕಳ ಬಗ್ಗೆ ಕಾಳಜಿ ತೋರಿಸಿದ್ದಾರೆ. ತಮ್ಮ ಪುತ್ರ ಪಂಕಜ್ ಅಭಿನಯದ 'ರಣ' ಚಿತ್ರದ ಹಾಡುಗಳನ್ನು ಜೆ.ಪಿ.ನಗರದಲ್ಲಿರುವ ರಮಣ ಮಹರ್ಷಿ ಅಂಧ ಮಕ್ಕಳ ಶಾಲೆಯಲ್ಲಿ ಬಿಡುಗಡೆ ಮಾಡಿದ ಅವರು ಅಂಧ ಮಕ್ಕಳು ಒಳಗಣ್ಣಿನಿಂದ ದೇವರನ್ನು ನೋಡುತ್ತಾರೆ.

ನಮ್ಮ ಅನುಕಂಪಕ್ಕಿಂತ ಹೆಚ್ಚಾಗಿ ಪ್ರೋತ್ಸಾಹದ ಅವಶ್ಯಕತೆ ಈ ಮಕ್ಕಳಿಗೆ ಬೇಕಾಗಿದೆ. ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಒಂದು ದಿನ ಶೂಟಿಂಗ್ ನಿಂತರೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ನಾನು ಒಂದು ದಿನದ ಚಿತ್ರೀಕರಣ ವೆಚ್ಚವನ್ನು ಶಾಲೆಗಾಗಿ ನೀಡುತ್ತೇನೆ ಎಂದರು.

ಪಂಕಜ್ ಹುಟ್ಟುಹಬ್ಬವನ್ನು ಮುಂದೆ ನಾವು ಅಂಧ ಮಕ್ಕಳ ಶಾಲೆಯಲ್ಲಿಯೇ ಆಚರಿಸುತ್ತೇವೆ. ಶಾಲೆಗಾಗಿ ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಪಂಚತಾರಾ ಹೋಟೆಲ್‌ಗಳಲ್ಲಿ ಆಡಿಯೊ ಬಿಡುಗಡೆ ಮಾಡುವುದಕ್ಕಿಂತ ಇದೊಂದು ಅರ್ಥಪೂರ್ಣ ಸಮಾರಂಭ ಎಂದರು. ಇಂತಹ ಮಾನವೀಯತೆಯ ಗುಣ ಉಳಿದ ಕಲಾವಿದರಿಗೂ ಬರಲಿ ಮತ್ತು ಅಂಧ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ಸಿಗುವಂತಾಗಲಿ. (ಒನ್‌ಇಂಡಿಯಾ ಕನ್ನಡ)

English summary
Actor, director and producer S Narayan's Kannada movie Rana audio release recently at Shree Ramana Maharishi Academy for the Blind (SRMAB) in JP Nagar, Bangalore. He expressed his concern towards blind children and lent his helping hand.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X