»   » ಜಸ್ಟ್ ಪಾಸ್ ತೆರೆ ಮೇಲೆ ನೋಡಿ ಆನಂದಿಸಿ

ಜಸ್ಟ್ ಪಾಸ್ ತೆರೆ ಮೇಲೆ ನೋಡಿ ಆನಂದಿಸಿ

Posted By:
Subscribe to Filmibeat Kannada

ನಿರ್ದೇಶಕ ದೀಪಕ್ ಹಾಗೂ ಅವರ ಟೆಕ್ಕಿ ದೋಸ್ತ್ ಗಳು ಸೇರಿ ನಿರ್ಮಿಸಿರುವ ಮನರಂಜನೆಯುಕ್ತ ಸಿನಿಮಾ 35/100 ಜಸ್ಟ್ ಪಾಸ್. ಚಿತ್ರದ ಹೆಸರಲ್ಲಿ ಜಸ್ಟ್ ಪಾಸ್ ಎಂದಿದೆ ನಿಜ ಆದರೆ ನಾವು ಯಾರನ್ನೂ ಕಡೆಗಣಿಸಿ ಚಿತ್ರಿಸಿಲ್ಲ. ಎಲ್ಲರಲ್ಲೂ ಆತ್ವವಿಶ್ವಾಸ ಮೂಡಿಸುವ ದೃಶ್ಯಗಳು ನಮ್ಮ ಚಿತ್ರದಲ್ಲಿದೆ ಎನ್ನುತ್ತಾರೆ ದೀಪಕ್.

ವರ್ಷದ ಹಿಂದೆಯೇ ತೆರೆಕಾಣಬೇಕಾಗಿದ್ದ ಜಸ್ಟ್ ಪಾಸ್ ಚಿತ್ರ ವಿತರಕರ ಅವಕೃಪೆಗೆ ಒಳಗಾಗಿ ಅಂತೂ ಇಂತೂ ತೆರೆಗೆ ಬರಲು ಸಿದ್ಧವಾಗಿದೆ. ಮಾ.26 ಕ್ಕೆ ಜಸ್ಟ್ ಪಾಸ್ ಚಿತ್ರ ತೆರೆಗೆ ಬರಲಿದೆ ಎಂದು ದೀಪಕ್ ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳ ಕಾಲೇಜು ಜೀವನ, ಹಾಸ್ಟೆಲ್ ವಾಸ, ಗೆಳಯ ಗೆಳತಿಯರ ಒಡನಾಟವನ್ನು ನೈಜವಾಗಿ ನಿರೂಪಿಸಲು ಪ್ರಯತ್ನಿಸಿದ್ದೇವೆ ಎನ್ನುವ ದೀಪಕ್ ಗೆ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವವಿದೆ.

ಜಸ್ಟ್ ಪಾಸ್35/100 ಚಿತ್ರದ ಟ್ರೈಲರ್

ದೂರದರ್ಶನ ಚಂದನ ವಾಹಿನಿಯ ನಿರ್ದೇಶಕ ಮಹೇಶ್ ಜೋಶಿ ಅವರ ಮಗ ವಿಕ್ರಮ್ ಜೋಶಿ ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಶ್ವೇತಾ ನಾಯಕಿಯಾಗಿದ್ದಾರೆ. ಮಾಸ್ಟರ್ ಡಿಗ್ರಿ ಪಡೆದಿರುವ ವಿಕ್ರಮ್ ,ಚಿತ್ರೀಕರಣದ ವೇಳೆಯಲ್ಲಿ ಗಾಯಗೊಂಡರೂ ಲವಲವಿಕೆಯಿಂದ ನಟಿಸಿದ್ದಾರಂತೆ. ರಾಷ್ಟ್ರಮಟ್ಟದಲ್ಲಿ ದೇಹದಾರ್ಢ್ಯ ಪಟು ಎನಿಸಿಕೊಂಡಿರುವ ರಘು ಅವರಿಗೆ ರಫ್ ಅಂಡ್ ಟಫ್ ಪಾತ್ರ ಸಿಕ್ಕಿದೆ. ಕಸ್ತೂರಿ ನಿವಾಸ್ ಫಿಲಂಸ್ ಲಾಂಛನದಲ್ಲಿ ಯಶವಂತ್, ಸಂತೋಷ್, ನಿರ್ಮಿಸುತ್ತಿರುವ ಹೊಸಬರ ಈ ಚಿತ್ರ ಅಭಿಮಾನಿಗಳ ಕೃಪೆ ಪಾತ್ರವಾಗಿ ಪಾಸ್ ಆಗುವುದೇ ಕಾದು ನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada