»   »  ಚಿತ್ರೀಕರಣ ಮುಗಿಸಿಕೊಂಡ ಸೀನ ಸೆನ್ಸಾರ್ ಮುಂದೆ

ಚಿತ್ರೀಕರಣ ಮುಗಿಸಿಕೊಂಡ ಸೀನ ಸೆನ್ಸಾರ್ ಮುಂದೆ

Subscribe to Filmibeat Kannada
Seena completes shooting
ನಾಯಕ ತರುಣ್ ಅಭಿನಯದ ಸೀನ ಚಿತ್ರಕ್ಕೆ ಚಿತ್ರೀಕರಣ ಸೇರಿದಂತೆ ನಂತರದ ಚಟುವಟಿಕೆಗಳೆಲ್ಲಾ ಪೂರ್ಣವಾಗಿದ್ದು ಪ್ರಸ್ತುತ ಮೊದಲ ಪ್ರತಿ ಸಿದ್ಧವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಹಾಡಾಗಿ ಮಾರುಕಟ್ಟೆಗೆ ಬಂದಿರುವ 'ಸೀನನಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರಶಂಸೆ ಸಿಕ್ಕಿದೆ. ಸದ್ಯದಲ್ಲೇ ಸೆನ್ಸಾರ್ ಮುಂದೆ ಕಾಣುವ ಚಿತ್ರ ಮುಂದಿನ ತಿಂಗಳಲ್ಲಿ ಬೆಳ್ಳೆಪರದೆಯ ಮೇಲೆ ರಾರಾಜಿಸಲಿದೆ.

ಅಂಕಿತ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುರುಳಿ ಮತ್ತು ಕುಪ್ಪುರಾಜ್ ನಿರ್ಮಿಸಿರುವ ಈ ಚಿತ್ರದಲ್ಲಿ ತರುಣ್‌ಗೆ ನಾಯಕಿಯರಾಗಿ ಪ್ರಿಯಾಂಕ ಹಾಗೂ ಅಂತರಾ ರೆಡ್ಡಿ ಅಭಿನಯಿಸಿದ್ದಾರೆ. ಬಸವರಾಜ ಬಳ್ಳಾರಿ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜಗದೀಶ್‌ವಾಲಿ ಅವರ ಛಾಯಾಗ್ರಹಣವಿದೆ.

ಎ.ಟಿ.ರವೀಶ್ ಸಂಗೀತ, ನಾಗೇಂದ್ರ ಅರಸ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಇಮ್ರಾನ್, ಪರಮೇಶ್, ಹರ್ಷ ನೃತ್ಯ, ಚೆನ್ನಯ್ಯ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ತರುಣ್, ಪ್ರಿಯಾಂಕ, ಅಂತರಾ ರೆಡ್ಡಿ, ರಮೇಶ್ ಭಟ್, ಕಿಶೋರಿ ಬಲ್ಲಾಳ್, ಮೈಕೋ ನಾಗರಾಜ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ನೀನಾಸಂ ಅಶ್ವತ್, ಸೂರ್ಯಕಿರಣ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೀನ ಚಿತ್ರಕ್ಕಾಗಿ ರು.4 ಲಕ್ಷದ ದಾಖಲೆ ಭಿತ್ತಿಪತ್ರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada