»   » ಕನ್ನಡಕ್ಕೆ ಅಡಿಯಿಟ್ಟ ಸರಳ ಸುಂದರಿ ಶ್ರದ್ಧಾದಾಸ್

ಕನ್ನಡಕ್ಕೆ ಅಡಿಯಿಟ್ಟ ಸರಳ ಸುಂದರಿ ಶ್ರದ್ಧಾದಾಸ್

Posted By:
Subscribe to Filmibeat Kannada

ಸರಳ ಸುಂದರಿ ಶ್ರದ್ಧಾದಾಸ್ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ತೆಲುಗಿನಲ್ಲಿ ಈಕೆ ಅಭಿನಯದ 'ಆರ್ಯ 2' ಚಿತ್ರ ಗಲ್ಲಾ ಪೆಟ್ಟಿಗೆಯನ್ನು ಲೂಟಿ ಮಾಡಿತ್ತು. ಮುಂಬೈ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಓದಿರುವ ಈಕೆ 'ಹೊಸ ಪ್ರೇಮ ಪುರಾಣ' ಹೇಳಲು ಕನ್ನಡಕ್ಕೆ ಬರುತ್ತಿದ್ದಾರೆ.

ಇದುವರೆಗೂ ಶ್ರದ್ಧಾ ದಾಸ್ ಒಂದು ಡಜನ್ ಚಿತ್ರಗಳಲ್ಲಿ ಅಭಿನಯಿಸಿದ್ದರಾದರೂ 'ಆರ್ಯ 2' ತಂದುಕೊಟ್ಟಷ್ಟು ಹೆಸರನ್ನು ಇನ್ಯಾವ ಚಿತ್ರವೂ ತರಲಿಲ್ಲ. ಈಕೆ ಎಲ್ಲಾ ಮುಂಬೈ ಬೆಡಗಿಯರಂತಲ್ಲ. ತುಂಬಾ ಸಾದಾ ಸೀದಾ, ಸರಳ ವ್ಯಕ್ತಿತ್ವ. ಅದಕ್ಕೆ ಈಕೆಯನ್ನು ಸರಳ ಸುಂದರಿ ಎಂದು ಕರೆದದ್ದು.

ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಈಕೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ನೆಲೆಯೂರ ಬೇಕು ಎಂಬುದು ಶ್ರದ್ಧಾ ಅವರ ಕನಸು. ಗ್ಲಾಮರ್ ಜೊತೆಗೆ ಅಭಿನಯಕ್ಕೆ ಒತ್ತು ನೀಡುವ ಪಾತ್ರಗಳಲ್ಲಿ ಮಿಂಚುವ ಬಯಕೆ ಈಕೆಯದು.

ಅಂದಹಾಗೆ ಹೊಸ ಪ್ರೇಮ ಪುರಾಣ ಚಿತ್ರವನ್ನು ಶಿವಕುಮಾರ್ ನಿರ್ಮಿಸುವುದರ ಜೊತೆಗೆ ನಿರ್ದೇಶಿಸುತ್ತಿದ್ದಾರೆ. ಚಿತ್ರದ ನಾಯಕ ನಟ ನಿಕಿತ್. ಪೂಜಾಗಾಂಧಿ ತಂಗಿ ರಾಧಿಕಾ ಗಾಂಧಿ ಹಾಗೂ ಶ್ರದ್ಧಾ ದಾಸ್ ಚಿತ್ರದ ನಾಯಕಿಯರು. ರಾಜೇಶ್ ರಾಮನಾನ್ ಅವರ ಸಂಗೀತ ಚಿತ್ರಕ್ಕಿದೆ.

English summary
Actress Shraddha Das debuts into Kannada movies. She plays the ultra modern girl role in her "Hosa Prema Purana". Shraddha boldly says I"m a straightforward girl.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada