»   »  ಮರ್ಡರ್ ಮಿಸ್ಟರಿ ಕತೆಯುಳ್ಳ ಶ್ಲೋಕ ಪ್ರಾರಂಭ

ಮರ್ಡರ್ ಮಿಸ್ಟರಿ ಕತೆಯುಳ್ಳ ಶ್ಲೋಕ ಪ್ರಾರಂಭ

Subscribe to Filmibeat Kannada

ಸ್ಯಾಂಡಲ್‌ವುಡ್ ಬ್ರೈನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮಹೇಂದ್ರ ನಿರ್ಮಿಸಿ ನಿರ್ದೇಶಿಸುತ್ತಿರುವ ಶ್ಲೋಕ ಚಿತ್ರದ ಮುಹೂರ್ತ ಕಳೆದ ವಾರ ನಡೆಯಿತು. ಭಯಾನಕ ಕುತೂಹಲಕಾರಿ ಹಾಗೂ ಮರ್ಡರ್ ಮಿಸ್ಟರಿ ಕಥೆಯುಳ್ಳ ಈ ಚಿತ್ರದಲ್ಲಿ ಗಂಡ ಹೆಂಡತಿ ಖ್ಯಾತಿಯ ಸಂಜನಾ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.

ಶ್ಲೋಕ ಇದು ನಾಯಕಿಯ ಹೆಸರು, ಅಲ್ಲದೆ ನಾಯಕಿಯ ಮನೆಯ ಹೆಸರೂ ಹೌದು. ರೋಹಿತ್, ಸುಮಂತ್, ನಾಗೇಂದ್ರ, ರಾಘು, ಎಂಬ ನಾಲ್ಕು ಜನ ಹೊಸ ಪ್ರತಿಭೆಗಳು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಂದ್ರ ಈಗಾಗಲೇ ಬ್ಲಾಕ್ ಎಂಬ ಸಿನೆಮಾವನ್ನು ನಿರ್ಮಿಸಿದ್ದು, ಇದು ಅವರ 2ನೇ ಕಾಣಿಕೆ.

ಸಕಲೇಶಪುರದಲ್ಲಿ 20 ದಿನಗಳ ಕಾಲ ಮಾತು ಹಾಗೂ ಹಾಡುಗಳ ಚಿತ್ರೀಕರಣ ನಡೆಸಿ, ಚಿಕ್ಕಮಗಳೂರಿನಲ್ಲಿ ಹಾಗೂ ಬೆಂಗಳೂರಿನ ಸ್ಟುಡಿಯೋದಲ್ಲಿ ಸೆಟ್ ಹಾಕಿ ಒಂದೊಂದು ಹಾಡನ್ನು 10 ದಿನಗಳ ಕಾಲ ಚಿತ್ರೀಕರಿಸಲಾಗುವುದು. ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಸಂಗೀತ ಸಂಯೋಜನೆಯನ್ನು ಆಶ್ಲೇ ಅನಂತ್ ಮಾಡುತ್ತಿದ್ದಾರೆ.

ರಮೇಶ್ ಅಪ್ಪಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ನಿರ್ದೇಶಕ ಮಹೇಂದ್ರರ ಸಹೋದರ ಶಶಿಧರ್ ಅವರ ಪಾತ್ರಕ್ಕೆ ಒಂದು ವಿಶೇಷ ಸಾಹಸ-ಸಂಯೋಜನೆಯನ್ನು ಡಿಫರೆಂಟ್ ಡ್ಯಾನಿಯವರು ಸಂಯೋಜಿಸಿದ್ದಾರೆ. ನೀನಾಸಂ ಅಶ್ವತ್ಥ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಕುರಿಗಳು ಪ್ರತಾಪ್, ಅಪೂರ್ವ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada