For Quick Alerts
  ALLOW NOTIFICATIONS  
  For Daily Alerts

  ಚಿರನಿದ್ರೆಗೆ ಜಾರಿದ 'ಆಹಾ ಬ್ರಹ್ಮಚಾರಿ' ಖ್ಯಾತಿಯ ಅನಿಲ್

  By Rajendra
  |

  ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆಯೊಂದು ಕಳಚಿ ಬಿದ್ದಿದೆ. ಕನ್ನಡ ಚಿತ್ರರಂಗದ ನಟ ಅನಿಲ್ (44)ವಿಧಿವಶರಾಗಿದ್ದಾರೆ. ಮೂತ್ರ ವೈಫಲ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಅನಿಲ್ ಕನ್ನಡದ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಅನಿಲ್ ಪತ್ನಿ ಆರ್ತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸುದೀರ್ಘ ಸಮಯದಿಂದ ಅವರು ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಬಾಳ ಸಂಗಾತಿ ಆರ್ತಿ ಅವರು ಕಿಡ್ನಿಯೊಂದನ್ನು ನೀಡಿದ್ದರು. ಆದರೂ ವಿಧಿ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ. ಅನಿಲ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

  ಆಹಾ ಬ್ರಹ್ಮಚಾರಿ, ಏನೂಂದ್ರೆ, ಮೃತ್ಯುಬಂಧನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಒಳ್ಳೆಯ ಸಿನಿಮಾಗಳಲ್ಲಿ ಅಭಿನಯಿಸುವ ಆಸೆ ಅನಿಲ್‌ಗಿತ್ತು. ಒಳ್ಳೆಯ ಸಿನಿಮಾಗಳನ್ನು ಮಾಡೋಣ ಎಂದು ಇತ್ತೀಚೆಗಷ್ಟೆ ಹೇಳಿದ್ದ ಎಂದು ನೆನಪಿಸಿಕೊಂಡಿದ್ದಾರೆ ಅವರೊಂದಿಗೆ ಎರಡು ಚಿತ್ರಗಳನ್ನು ಮಾಡಿರುವ ಗುರುಪ್ರಸಾದ್.

  English summary
  Kannada actor Anil passes away here on Monday while undergoing treatment for a kidney ailment. He was 44.Anil, who was undergoing treatment for the past couple of weeks. He acted in Aaha Brahmachari, Enoondre, Mrutyu Bandana etc.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X