»   »  ಬೇಳೆ ಬೇಯಿಸಿಕೊಳ್ಳಲೊಂದು ಟಿವಿ ಕಾರ್ಯಕ್ರಮ

ಬೇಳೆ ಬೇಯಿಸಿಕೊಳ್ಳಲೊಂದು ಟಿವಿ ಕಾರ್ಯಕ್ರಮ

Posted By:
Subscribe to Filmibeat Kannada

*ಜಯಂತಿ

Vijay
ಅದೊಂದು ಫೋನ್-ಇನ್ ನೇರ ಕಾರ್ಯಕ್ರಮ...
ಕರೆ ಮಾಡಿದವರು:ಹಲೋ
ನಿರೂಪಕಿ: ಹಲೋ... ಹೇಳಿ. ನಮ್ಮ ಜೊತೆ ಡೈರೆಕ್ಟರ್ ಸೂರಿ, ಹೀರೋ ವಿಜಯ್ ಇದ್ದಾರೆ ಮಾತಾಡಿ.
ಕರೆ ಮಾಡಿದವರು: ಸೂರಿ ಸಾರ್ ಗೆ ಕೊಡಿ ಮೇಡಮ್.
ಸೂರಿ: ಹೇಳಿ

ಕರೆ ಮಾಡಿದವರು: ಸಾರ್... ಜಂಗ್ಲಿ ಸೂಪರ್ ಪಿಚ್ಚರ್ ಸಾರ್. ನಾಲ್ಕು ಜನನ್ನ ಮೆಚ್ಚಿಸೋಕೆ ನೀವು ಸಿನಿಮಾ ಮಾಡಬೇಡಿ. ನಾಲ್ಕು ಲಕ್ಷ ಜನ ಮೆಚ್ಚುವಂಥ ಸಿನಿಮಾ ಮಾಡಿ ಸಾರ್. ನಿಮ್ಮ ಜೀವನದಲ್ಲಿ ಏನೆಲ್ಲಾ ನೋಡಿದೀರೋ ಅದನ್ನೆಲ್ಲಾ ಸಿನಿಮಾ ಮಾಡಿ ಸಾರ್. ನಾವು ನೋಡ್ತೀವಿ.

ಸೂರಿ:
ನಾನು ಮೊದಲು ನಾಲ್ಕು ಜನಕ್ಕೇ ಹೆದರ್ತಾಇದ್ದೆ. ಈಗ ನಿಮ್ಮ ಮಾತು ಕೇಳಿ ಬಲ ಬಂದಿದೆ. ನೀವು ನೋಡೋತನಕ ನಾನು ಸಿನಿಮಾ ಮಾಡ್ತೀನಿ. ಥ್ಯಾಂಕ್ಯು. ಮತ್ತೆ ನಮ್ಮ ಸಿನಿಮಾ ನೋಡಿ.

ವಿಜಯ್:
ನಮ್ಮ ಸಿನಿಮಾ ಚೆನ್ನಾಗಿಲ್ಲ ಅಂತ ಕೆಲವರು ಅಪಪ್ರಚಾರ ಮಾಡ್ತಾ ಇದ್ದಾರೆ. ಅದಕ್ಕೆಲ್ಲಾ ಕೇರ್ ಮಾಡಬೇಡಿ. ಹೋಗಿ ಸಿನಿಮಾ ನೋಡಿ. ನಿಮ್ಮಂಥವರೇ ನಮಗೆ ಮುಖ್ಯ.

ವಾಹಿನಿಗಳಲ್ಲಿ ಇಂಥ ನೇರಪ್ರಸಾರದ ಕಾರ್ಯಕ್ರಮಗಳು ಮಾಮೂಲು. ಇಲ್ಲಿ ಕೆಲವರನ್ನು ಹಣಿಯುವ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ, ಅತಾರ್ಕಿಕವಾಗಿ ಮಾತಾಡುವುದು ಅವ್ಯಾಹತವಾಗಿ ನಡೆದಿದೆ. ಪಾಪ, ನಿರೂಪಕಿ ಸುಮ್ಮನಿರುತ್ತಾರೆ. ಆಕೆ ನಿಯಂತ್ರಕಿ ಅಲ್ಲವೇ ಅಲ್ಲ.

ಅಂದಹಾಗೆ, ಜಂಗ್ಲಿ ಚಿತ್ರದ ಕಾಪಿರೈಟನ್ನು ಉದಯ ಟಿವಿ 88 ಲಕ್ಷಕ್ಕೆ ಖರೀದಿಸಿದೆ. ರಾಕ್‌ಲೈನ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದಯಾಳ್ ಮಾತ್ರ ಅವರಿಗೆ ತಮ್ಮ ಮನೆ ಒಪ್ಪಿಸಿ ಒದ್ದಾಡುತ್ತಿದ್ದಾರೆ ಅನ್ನುತ್ತಿದೆ ಗಾಂಧಿನಗರ. ಸರ್ಕಸ್ ನಿರ್ಮಿಸಿ, ಇತ್ತೀಚೆಗಷ್ಟೇ ಗೃಹಪ್ರವೇಶ ಮಾಡಿದ್ದ ಮನೆಯನ್ನೇ ಕಳೆದುಕೊಂಡಿರುವ ದಯಾಳ್ ಸದ್ಯಕ್ಕೆ ಗಾಂಧಿನಗರದ ಕಡೆ ತಲೆಹಾಕುವುದು ಅನುಮಾನವಾಗಿದೆ!


ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ಜಂಗ್ಲಿ
ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada