»   » ಚೆನ್ನೈಕಿಂಗ್ಸ್ ಗೆದ್ದ ಖುಷಿಗೆ ಪ್ರಕಾಶ್ ರೈ ಗುಂಡು ಪಾರ್ಟಿ

ಚೆನ್ನೈಕಿಂಗ್ಸ್ ಗೆದ್ದ ಖುಷಿಗೆ ಪ್ರಕಾಶ್ ರೈ ಗುಂಡು ಪಾರ್ಟಿ

Posted By:
Subscribe to Filmibeat Kannada

ಭಾನುವಾರ ರಾತ್ರಿ ನಟ ಪ್ರಕಾಶ್ ರೈ ಆನಂದಕ್ಕೆ ಪಾರವೇ ಇರಲಿಲ್ಲ. ಅದ್ಭುತ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಮುಡಿಗೆ ಐಪಿಎಪ್ ಕಿರೀಟ ಒಲಿದದ್ದೆ ಪ್ರಕಾಶ್ ರೈ ಸಂತಸಕ್ಕ್ಕೆ ಕಾರಣವಾಗಿದೆ. ಶಿಳ್ಳೆ ಹೊಡೆದು, ಕುಣಿದು, ಗುಂಡು ಹಾಕಿ ಸಂಭ್ರಮಿಸಿದ್ದಾರೆ. ಬಹಳಷ್ಟು ಮಂದಿಗೆ ಗೊತ್ತಿಲ್ಲ, ಪ್ರಕಾಶ್ ರೈ ಒಬ್ಬ ಉತ್ಕಟ ಕ್ರಿಕೆಟ್ ಅಭಿಮಾನಿ ಎಂಬುದು.

ಚೆನ್ನೈ ಸೂಪರ್ ಕಿಂಗ್ಸ್ ಗೆದ್ದೆ ಗೆಲ್ಲುತ್ತದೆ ಎಂದು ಪ್ರಕಾಶ್ ರೈ ಬೆಟ್ ಕಟ್ಟಿದ್ದರು! ಅವರು ಬೆಟ್ ಕಟ್ಟಿದ್ದು ಯಾರೊಂದಿಗೆ ಗೊತ್ತೆ? ಅವರ ದೊಡ್ಡ ಮಗಳೊಂದಿಗೆ. ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವ ಮೂಲಕ ಪ್ರಕಾಶ್ ರೈ ಸಹ ಬೆಟ್ಟಿಂಗ್ ನಲ್ಲಿ ಗೆದ್ದಿದ್ದರು. ಈ ಖುಷಿಗೆ ಅವರು ಉಳಿದುಕೊಂಡಿದ್ದ ಬೆಂಗಳೂರಿನ ಅಭಿಮಾನಿ ಹೋಟೆಲ್ ನಲ್ಲಿ ಗುಂಡಿನ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.

ಇದಕ್ಕೂ ಒಂದು ದಿನ ಮುನ್ನ ಪ್ರಕಾಶ್ ರೈ ಮಾಜಿ ಕ್ರಿಕೆಟಿಗೆ ಜಿ ಆರ್ ವಿಶ್ವನಾಥ್ ಅವರನ್ನು ಜಯನಗರದ ಕಾಸ್ಮೊ ಕ್ಲಬ್ ನಲ್ಲಿ ಭೇಟಿಯಾಗಿದ್ದರು. ಆಸ್ಟ್ರೇಲಿಯಾ ಹಾಗೂ ಚೆನ್ನೈನ ಚೇಪಕ್ ಮೈದಾನದಲ್ಲಿ ವಿಶ್ವನಾಥ್ ಅವರ ಆಡಿದ ಆಟವನ್ನು ನೆನೆದು ಖುಷಟ್ಟಿದ್ದರು. ಅಂದಹಾಗೆ ರೈ ನೆಚ್ಚಿನ ಆಟಗಾರ ಯಾರು ಗೊತ್ತೆ? ಮಹೇಂದ್ರ ಸಿಂಗ್ ಧೋನಿ!

ಏತನ್ಮಧ್ಯೆ ಪ್ರಕಾಶ್ ರೈ ಚೊಚ್ಚಲ ನಿರ್ದೇಶನದ ಕನ್ನಡ ಚಿತ್ರ 'ನಾನು ನನ್ನ ಕನಸು' ನಿರ್ಮಾಣ ನಂತರದ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆ ಸಿದ್ಧವಾಗಿದೆ. ಈ ಚಿತ್ರವನ್ನು ಕೊಡಗು ಜಿಲ್ಲೆಯ ಬಾಗಮಂಡಲ, ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ, ತೆಲುಗೂರಿನ ಚಹಾ ತೋಟಗಳು, ಸಕಲೇಶಪುರ, ಶನಿವಾರಸಂತೆ ಹಾಗೂ ಮಡಿಕೇರಿ ಸುತ್ತಮುತ್ತ 'ನಾನು ನನ್ನ ಕನಸ'ನ್ನು ಚಿತ್ರೀಕರಿಸಲಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada