»   » ಸುಧಾಮೂರ್ತಿ ಈಗ ಕಸಾಪ ವಿದ್ಯಾರ್ಥಿನಿ!

ಸುಧಾಮೂರ್ತಿ ಈಗ ಕಸಾಪ ವಿದ್ಯಾರ್ಥಿನಿ!

Posted By:
Subscribe to Filmibeat Kannada

ಸದಾಶಿವ ಶೆಣೈ ನಿರ್ದೇಶನದ ಚೊಚ್ಚಲನ ಚಿತ್ರ 'ಪ್ರಾರ್ಥನೆ'ಯ ನಟಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಈಗೇನು ಮಾಡುತ್ತಿದ್ದಾರೆ. ಈಗವರು ಡಿಪ್ಲೊಮಾ ವಿದ್ಯಾರ್ಥಿನಿ! ಈ ವಯಸ್ಸಿನಲ್ಲಿ ಅವರು ಏನನ್ನು ಕಲಿಯುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತಿದೆಯೇ?

ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಶಾಸನ ಶಾಸ್ತ್ರದ ಡಿಪ್ಲೊಮಾ ತರಗತಿಗಳಿಗೆ ಸುಧಾಮೂರ್ತಿ ಹಾಜರಾಗುತ್ತಿದ್ದಾರೆ. ಸುಧಾಮೂರ್ತಿ ಅವರ ಆಸಕ್ತಿ ಕ್ಷೇತ್ರಗಳು ಎಂಥಹವರನ್ನು ಬೆರಗುಗೊಳಿಸುತ್ತವೆ. ಅವರ ಕಲಿಕೆಯ ಉತ್ಸಾಹಕ್ಕೆ ಮೂಕ ವಿಸ್ಮಿತರಾಗಬೇಕು. ಮೂಲತಃ ವಿಜ್ಞಾನ ವಿದ್ಯಾರ್ಥಿಯಾದ ಸುಧಾಮೂರ್ತಿ ಇದೀಗ ಇತಿಹಾಸದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.

ಪಿ ವಿ ಕೃಷ್ಣಮೂರ್ತಿಗಳು ತೆಗೆದುಕೊಳ್ಳುವ ಶಾಸನ ಲಿಪಿ ತರಗತಿ ಎಂದರೆ ಸುಧಾಮೂರ್ತಿ ಅವರಿಗೆ ವಿಶೇಷ ಆಸಕ್ತಿ
ಚಾಮರಾಜಪೇಟೆಯ ಕಸಾಪ ಕಟ್ಟಡದ ನೆಲಮಹಡಿಯಲ್ಲಿ ಶಾಸನ ಶಾಸ್ತ್ರದ ತರಗತಿಗಳು ನಡೆಯುತ್ತಿವೆ. ಒಂಬತ್ತು ತಿಂಗಳ ಕೋರ್ಸ್ ನಲ್ಲಿ ಶಾಸನಗಳನ್ನು ಹೇಗೆ ಓದಬೇಕು, ಪುರಾತನ ಲಿಪಿಗಳ ಅಧ್ಯಯನ, ಸಂಶೋಧನೆ ಹೇಗೆ ಎಂಬ ಮಹತ್ವದ ಸಂಗತಿಗಳನ್ನು ತಿಳಿಸಲಾಗುತ್ತದೆ. ಕನ್ನಡದ ಮೊದಲ ಶಾಸನ ಹಲ್ಮಿಡಿಯಿಂದ ಹಿಡಿದು ಇದುವರೆಗಿನ ಶಾಸನಗಳ ಬಗ್ಗೆ ಸಂಶೋಧನೆ ಮಾಡುವುದೇ ಈ ಕೋರ್ಸ್ ನ ಉದ್ದೇಶ.

ಪಿ ವಿ ಕೃಷ್ಣಮೂರ್ತಿಗಳು ತೆಗೆದುಕೊಳ್ಳುವ ಶಾಸನ ಲಿಪಿ ತರಗತಿ ಎಂದರೆ ಸುಧಾಮೂರ್ತಿ ಅವರಿಗೆ ವಿಶೇಷ ಆಸಕ್ತಿಯಂತೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6ರಿಂದ 7 ಗಂಟೆಯ ತನಕ ತರಗತಿಗಳು ನಡೆಯುತ್ತವೆ. ಸುಧಾಮೂರ್ತಿ ಅವರು ಕೋರ್ಸ್ ಗೆ ಸೇರಿಸುವ ಮುನ್ನ ಅರ್ಜಿ ಸಲ್ಲಿಸಲು ಕಾಲ ಮುಗಿದಿತ್ತು. ಆದರೆ ತಾವು ಪರೀಕ್ಷೆಗಾಗಿ ಬರುತ್ತಿಲ್ಲ. ಕಲಿಯಲು ಬರುತ್ತಿರುವುದಾಗಿ ಕಸಾಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅವರ ಬಳಿ ವಿನಂತಿಸಿದಾಗ ಅವರು ಅವಕಾಶ ಕಲ್ಪಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada