»   » ಪೈಲಟ್ ಕೈಹಿಡಿಯಲಿದ್ದಾರೆ ನಟಿ ಶ್ರೀದೇವಿಕಾ

ಪೈಲಟ್ ಕೈಹಿಡಿಯಲಿದ್ದಾರೆ ನಟಿ ಶ್ರೀದೇವಿಕಾ

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ 'ನೀಲಕಂಠ' ಹಾಗೂ 'ಮೈ ಆಟೋಗ್ರಾಫ್' ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸಿದ್ದ ಮೋಹಕ ತಾರೆ ಶ್ರೀದೇವಿಕಾ ಹಸೆಮಣೆ ಏರಲಿದ್ದಾರೆ. ವೃತ್ತಿಯಲಿ ಪೈಲಟ್ ಆಗಿರುವ ಮುಂಬೈ ಮೂಲದ ರೋಹಿತ್ ರಾಮಚಂದ್ರನ್ ಅವರ ಕೈಹಿಡಿಯಲಿದ್ದಾರೆ ಶ್ರೀದೇವಿಕಾ.

ಕೇರಳದ ಪಾಲಘಾಟ್ ನ ಹೋಟೆಲ್ ಗಜಾಲಾದಲ್ಲಿ ಶ್ರೀದೇವಿಕಾ ಮತ್ತು ರೋಹಿತ್ ಮದುವೆ ನಿಶ್ಚಿತಾರ್ಥ ಬುಧವಾರ(ಫೆ.24) ನೆರವೇರಿತು. ಗುರು ಹಿರಿಯರು ಮದುವೆ ದಿನಾಂಕವನ್ನು ಮಾರ್ಚ್ 27,2010ಕ್ಕೆ ನಿಗದಿಪಡಿಸಿದ್ದಾರೆ. ತೆಲುಗು, ತಮಿಳು ಮತ್ತು ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಶ್ರೀದೇವಿಕಾ ಅವರದು.

ಕನ್ನಡದ 'ಕ್ಷಣ ಕ್ಷಣ' ಮತ್ತು 'ಸಂತ' ಚಿತ್ರಗಳಲ್ಲೂ ಶ್ರೀದೇವಿಕಾ ಅಭಿನಯಿಸಿದ್ದಾರೆ. ಕಲಾವಿದರ ವೃತ್ತಿ ಕ್ಷಣಿಕ ಎನ್ನುವ ಶ್ರೀದೇವಿಕಾ ಅವರದು ಮೂಲತಃ ಕೃಷಿಕ ಕುಟುಂಬ. 2003ರಲ್ಲಿ ಕೇರಳದ ಚಿನ್ನಾಭರಣ ಜಾಹೀರಾತಿನಲ್ಲಿ ಕಾಣಿಸಿಕೊಂಡು 'ಬೆಸ್ಟ್ ಫೇಸ್' ಪ್ರಶಸ್ತಿಯನ್ನು ಶ್ರೀದೇವಿಕಾ ತನ್ನದಾಗಿಸಿಕೊಂಡಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada