»   » ಕೃಷ್ಣನ ಕೊಳಲಿಗೆ ಮನಸೋತ ಗೋಪಿಕೆ

ಕೃಷ್ಣನ ಕೊಳಲಿಗೆ ಮನಸೋತ ಗೋಪಿಕೆ

Posted By:
Subscribe to Filmibeat Kannada

ಹೊಸತನ್ನು ಕಲಿಯಬೇಕು ಎಂದು ಹಂಬಲಿಸುವ ಕಲಾವಿದರ ಸಂಖ್ಯೆಗೇನು ಬರವಿಲ್ಲ. ಆ ಸಾಲಿಗೆ ಇದೀಗ ಹೊಸದಾಗಿ ಜನಪ್ರಿಯ ಪೋಷಕ ನಟಿ, ಕಿರುತೆರೆ ತಾರೆ ಪವಿತ್ರಾ ಲೋಕೇಶ್ ಸೇರ್ಪಡೆಯಾಗಿದ್ದಾರೆ. ಆಕೆ ಈಗ ಕೃಷ್ಣನ ಕೊಳಲಿಗೆ ಮನಸೋತ ಗೋಪಿಕೆ. ಶ್ರದ್ಧೆಯಿಂದ ಕೊಳಲು ವಾದನ ಕಲಿಯಲು ಮುಂದಡಿಯಿಟ್ಟಿದ್ದಾರೆ ಪವಿತ್ರಾ ಲೋಕೇಶ್.

ಪವಿತ್ರಾ ಲೋಕೇಶ್ ಈಗ ಪ್ರಶಾಂತ್ ಅವರ ಬಳಿ ಕೊಳಲು ವಾದನವನ್ನು ಕಲಿಯುತ್ತಿದ್ದಾರೆ. ಸುಷಿರ ವಾದ್ಯಗಳಲ್ಲಿ ಕೊಳಲೆಂದರೆ ಇಷ್ಟಪಡುವ ಪವಿತ್ರಾ ಅವರು ಕೊಳಲು ವಾದನದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವುದಾಗಿ ತಿಳಿಸಿದ್ದಾರೆ. ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಪವಿತ್ರಾ ಅವರಿಗೆ ತೆಲುಗಿನಲ್ಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ.

ಏತನ್ಮಧ್ಯೆ ಗಿರೀಶ್ ಕಾಸರವಳ್ಳಿ ಅವರು ಮತ್ತೊಂದು ಚಿತ್ರಕ್ಕೆ ಪವಿತ್ರಾ ಲೋಕೇಶ್ ಅವರನ್ನು ಆಹ್ವಾನಿಸಿದ್ದಾರೆ. ಈ ಹಿಂದೆ ಪವಿತ್ರಾ ಲೋಕೇಶ್ ಅವರು ಕಾಸರವಳ್ಳಿ ಅವರ 'ನಾಯಿ ನೆರಳು' ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 'ಹೂ' ಚಿತ್ರದಲ್ಲೂ ಪವಿತ್ರಾ ಲೋಕೇಶ್ ನಟಿಸಿದ್ದಾರೆ. 'ಹೂ' ಚಿತ್ರ ತೆರೆಕಾಣಬೇಕಾಗಿದೆ.

Please Wait while comments are loading...