»   »  ಕನ್ನಡದಉದ್ಯಾನ್ ಎಕ್ಸ್ ಪ್ರೆಸ್ ಹತ್ತಿದ ರಿಯಾ ಸೇನ್

ಕನ್ನಡದಉದ್ಯಾನ್ ಎಕ್ಸ್ ಪ್ರೆಸ್ ಹತ್ತಿದ ರಿಯಾ ಸೇನ್

Subscribe to Filmibeat Kannada

ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ನಿರ್ಮಿಸುತ್ತಿರುವ ಚಿತ್ರ 'ಉದ್ಯಾನ್ ಎಕ್ಸ್ ಪ್ರೆಸ್'. ಈ ಚಿತ್ರದ ನಾಯಕಿಯರಲ್ಲೊಬ್ಬರಾದ ನೀತು ಸ್ಥಾನಕ್ಕೆ ರಿಯಾ ಸೇನ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೆ. ಆದರೆ ಈ ಸುದ್ದಿ ಸುಳ್ಳು ಎಂದು ನೀತು ಸ್ಪಷ್ಟಪಡಿಸಿದ್ದಾರೆ.

''ರಿಯಾ ಸೇನ್ ಬರುತ್ತಿರುವುದು ಬಿಯಾಂಕ ದೇಸಾಯಿ ಪಾತ್ರಕ್ಕೆ. 'ಉದ್ಯಾನ್ ಎಕ್ಸ್ ಪ್ರೆಸ್ ' ನನ್ನ ಕೈತಪ್ಪಿಲ್ಲ. ಈ ಚಿತ್ರದಲ್ಲಿ ನಾನು ಛಾಯಾಗ್ರಾಹಕಿಯಾಗಿ ಕಾಣಿಸಲಿದ್ದೇನೆ'' ಎಂದು ನೀತು ತಿಳಿಸಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ಸ್ಟಡಿ ಮಾಡಿದ್ದೇನೆ. ಪಾತ್ರವನ್ನು ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ನೀತು.

ಉದ್ಯಾನ್ ಎಕ್ಸ್ ಪ್ರೆಸ್ ಚಿತ್ರವನ್ನು ಪ್ರತಾಪ್ ಗೌಡನಿರ್ದೇಶಿಸಲಿದ್ದಾರೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿ ಕನ್ನಡದಲ್ಲಿ ರಿಯಾ ಸೇನ್ ಮತ್ತು ಸಯಾಲಿ ಭಗತ್ ಅಭಿನಯಿಸಲಿದ್ದಾರೆ. ಮುಂಬೈ ಮೂಲದ ಕಾರ್ಪೊರೇಟ್ ಕಂಪನಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರದಲ್ಲಿ ನಾಲ್ವರು ನಾಯಕ ಮತ್ತು ನಾಯಕಿಯರು. ನೀತು ಹೊರತು ಪಡಿಸಿದರೆ ಉಳಿದವರೆಲ್ಲಾ ಕನ್ನ್ನಡೇತರ ನಟಿಯರು.

ಧ್ಯಾನ್, ಕಿರಣ್(ಹಾಗೆ ಸುಮ್ಮನೆ), ಅಕುಲ್ ಬಾಲಾಜಿ ಮತ್ತು ಅಬೀಬ್ ಜತೆಯಾಗಿ ಪ್ರಾಚಿ ದೇಸಾಯಿ(ರಾಕ್ ಆನ್), ನರ್ಗೀಸ್(ಗರಂ ಮಸಾಲ),ರಿಯಾಸೇನ್ ಮತ್ತು ಸಯಾಲಿ ಭಗತ್ ಸಾಥ್ ನೀಡಲಿದ್ದಾರೆ. ಹಿಂದಿಯಲ್ಲಿ ರಿಯಾಸೇನ್ ಪಾತ್ರವನ್ನು ಬಿಯಾಂಕ ದೇಸಾಯಿ ಅವರೇ ಮಾಡಲಿದ್ದಾರೆ ಎನ್ನುತ್ತಾರೆ ಪ್ರತಾಪ್ ಗೌಡ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಹುಲ್ ದೇವ್, ಶರತ್ ಬಾಬು, ಶೋಭನಾ, ಉಮೇಶ್, ಶರಣ್ ಇದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣ, ರಾಜ್ ನಾರಾಯಣ್ ದಾಸ್ ಸಂಗೀತ, ಸನತ್ ಕುಮಾರ್ ಸಂಕಲನ, ವಿಜಯ್ ಪಾಂಡೇನ್ ಹಾಗೂ ಸಂದೀಪ್ ಸಂಭಾಷಣೆ ಚಿತ್ರಕ್ಕಿದೆ.

ಬೆಂಗಳೂರು, ಮೈಸೂರು ಮತ್ತು ಕಾರವಾರ ಸುತ್ತಮುತ್ತ 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಸೆಪ್ಟೆಂಬರ್ 15ಕ್ಕೆ 'ಉದ್ಯಾನ್ ಎಕ್ಸ್ ಪ್ರೆಸ್'ಗೆ ಮುಹೂರ್ತ ನಿಗದಿಯಾಗಿದೆ. ಮತ್ತೊಂದು ವಿಷಯ, ಸಂಭಾವನೆ ಹಾಗೂ ಡೇಟ್ಸ್ ಸಮಸ್ಯೆ ಕಾರಣ ಬರಗೂರು ರಾಮಚಂದ್ರಪ್ಪ ಅವರ 'ಶಬರಿ' ಚಿತ್ರವನ್ನು ನೀತು ಕೈಬಿಟ್ಟಿದ್ದಾರೆ. ಶಬರಿ ಚಿತ್ರವನ್ನು ರಮೇಶ್ ಯಾದವ್ ನಿರ್ಮಿಸುತ್ತಿದ್ದಾರೆ.

(ದಟ್ಸ್ ಕನ್ನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada