»   »  ಕೈಮುರಿದುಕೊಂಡ ಅಭಿಮಾನಿ ಚಿತ್ರದ ನಾಯಕ

ಕೈಮುರಿದುಕೊಂಡ ಅಭಿಮಾನಿ ಚಿತ್ರದ ನಾಯಕ

Posted By:
Subscribe to Filmibeat Kannada
Actor Rahul
'ನನ್ನುಸಿರೆ'ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ರಾಹುಲ್ ಅವರ ಮತ್ತೊಂದು ಚಿತ್ರ 'ಅಭಿಮಾನಿ' ಬಿಡುಗಡೆಗೆ ಸಿದ್ಧವಾಗಿದೆ. ಎರಡನೇ ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಉತ್ಸಾಹದ ನಡುವೆ ರಾಹುಲ್ ತಮ್ಮ ಎಡತೋಳಿಗೆ ಗಾಯ ಮಾಡಿಕೊಂಡಿದ್ದಾರೆ.

ನೆಲಕ್ಕೆ ಅಂಗೈಯೂರಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರಬೇಕಾದರೆ ಆಯ ತಪ್ಪಿ ಬಿದ್ದುಬಿಟ್ಟೆ. ಚಿತ್ರ ಬಿಡುಗಡೆಯಾಗುತ್ತಿರುವ ಸಂತೋಷ ನೋವನ್ನು ಮರೆಸಿದೆ. ಕೈಗೆ ಕಟ್ಟಿರುವ ಕಟ್ಟನ್ನುಇನ್ನು ಕೆಲವೇ ದಿನಗಳಲ್ಲಿ ಬಿಚ್ಚುತ್ತಾರೆ ಎಂದು ರಾಹುಲ್ ಹರ್ಷ ವ್ಯಕ್ತಪಡಿಸಿದರು.

ಅಭಿಮಾನಿ ಚಿತ್ರದಲ್ಲಿ ರಾಹುಲ್ ಅವರಿಗೆ ತಂದೆಯಾಗಿ ಹಿರಿಯ ನಟ ಶರತ್ ಬಾಬು ನಟಿಸಿದ್ದಾರೆ. ಅವರು ಮಾತನಾಡುತ್ತಾ, ಪಕ್ಕ್ಕದೆ ಮನೆ ಹುಡುಗಿಯೊಂದಿಗೆ ಮಾಡಬಾರದು ಮಾಡಿರುತ್ತಾನೆ. ಇವರ ತಂದೆ ನೋಡಿ ಅಟ್ಟಿಸಿಕೊಂಡು ಹೋಗಿರುತ್ತಾರೆ. ಇವನೆಲ್ಲೋ ಗೋಡೆ ಹಾರಿ ಬಿದ್ದಿರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು ಶರತ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada