»   »  ದಿಗಂತ್ ಜತೆ ಶುಭಾ ಪೂಂಜಾರ ಹೊಸ ಚಿತ್ರ

ದಿಗಂತ್ ಜತೆ ಶುಭಾ ಪೂಂಜಾರ ಹೊಸ ಚಿತ್ರ

Posted By:
Subscribe to Filmibeat Kannada
Shubha Poonja pair with Diganth
ಶುಭಾ ಪುಂಜ ಚಿತ್ರಗಳು ಒಂದರ ನಂತರ ಒಂದು ಮಗುಚಿ ಬೀಳುತ್ತಿವೆ, ಆದರೂ ಕನ್ನಡ ಚಿತ್ರರಂಗದಲ್ಲಿ ಅವರ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಬಹಳಷ್ಟು ಕನ್ನಡ ಚಿತ್ರಗಳು ಈ ಸುಂದರಿಯನ್ನ್ನು ಹುಡುಕಿಕೊಂಡು ಬರುತ್ತಿವೆ. ಈಗ ಇನ್ನೂ ಹೆಸರಿಡದ ಚಿತ್ರದಲ್ಲಿ ದಿಗಂತ್ ಜತೆ ನಟಿಸುವ ಅವಕಾಶ ಸಿಕ್ಕಿದೆ.

ಈ ಚಿತ್ರವನ್ನು ವಿ ಉಮಾಕಾಂತ್ ನಿರ್ದೇಶಿಸುತ್ತಿದ್ದಾರೆ. ಅನುರಾಗ ಸಂಗಮ, ಮದುವೆ ಮತ್ತು ರಂಗೇನಹಳ್ಳಿಯಾಗೆ ರಂಗಾದ ಗೌಡ ಚಿತ್ರಗಳನ್ನು ಈಗಾಗಲೇ ಉಮಾಕಾಂತ್ ನಿರ್ದೇಶಿಸಿದ್ದಾರೆ. ಉತ್ತಮ ನಟ ಎನ್ನಿಸಿಕೊಂಡಿರುವ ದಿಗಂತ್ ಗೂ ಅವಕಾಶಗಳೇನು ಕಡಿಮೆ ಇಲ್ಲ. ಯೋಗರಾಜ ಭಟ್ಟರ ಮನಸಾರೆ ಸೇರಿದಂತೆ ಈ ಪ್ರೀತಿ, ಹೌಸ್ ಫುಲ್ ಮತ್ತು ಬಿಸಿಲೇ ಚಿತ್ರಗಳು ಅವರ ಕೈಯಲ್ಲಿವೆ.

ಶುಭಾ ಪೂಂಜಾ ನಟನೆಯ ಸ್ಲಂ ಬಾಲ ಮತ್ತು ಅಂಜದಿರು ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಹೇಳಿಕೊಳ್ಳುವಂತಹ ಸುದ್ದಿಯೇನು ಮಾಡಲಿಲ್ಲ. ವಿಜಯ್ ನಟನೆಯ ತಾಕತ್ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ರಾಘವೇಂದ್ರ ಜತೆಗೆ ಅಭಿನಯಿಸುತ್ತಿರುವ ಗೋಲ್ ಮಾಲ್ ಚಿತ್ರ ಸಹ ಈಕೆಯ ಕೈಯಲ್ಲಿದೆ. ದಿಗಂತ್ ರೊಂದಿಗಿನ ಹೊಸ ಚಿತ್ರ ಜೂನ್ ನಲ್ಲಿ ಸೆಟ್ಟೇರಲಿದ್ದು ಈ ಚಿತ್ರವನ್ನು ಸತ್ಯ ನಾರಾಯಣ ನಿರ್ಮಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada