»   » ವಿ ಶಾಂತಾರಾಂ ಚಲನಚಿತ್ರ ಪ್ರಶಸ್ತಿ ಪ್ರಕಟ

ವಿ ಶಾಂತಾರಾಂ ಚಲನಚಿತ್ರ ಪ್ರಶಸ್ತಿ ಪ್ರಕಟ

Subscribe to Filmibeat Kannada
Jimmi Shergil accepting Best Supporting actor award
ಮುಂಬೈ, ಡಿ. 27 : ಹಿಂದಿ ಚಿತ್ರರಂಗದ ದಿಗ್ಗಜ ವಿ ಶಾಂತಾರಾಮ್ ಹೆಸರಲ್ಲಿ ಸ್ಥಾಪಿಸಿರುವ ಪ್ರತಿಷ್ಠಿತ ಪ್ರಶಸ್ತಿಗಳು ಪ್ರಕಟವಾಗಿದ್ದು, ಅಮೀರ್ ಖಾನ್ ನಿರ್ದೇಶಿತ 'ತಾರೆ ಜಮೀನ್ ಪರ್' ಮತ್ತು ಅಶುತೋಶ್ ಗೌರಿಕರ್ ನಿರ್ದೇಶನದ 'ಜೋಧಾ ಅಕ್ಬರ್' ಸಮ ಗೌರವ ಪಡೆದಿವೆ. ವಿವಿಧ ವಿಭಾಗಗಳಲ್ಲಿ ತಲಾ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ.

ಅಮೀರ್ ಖಾನ್ ನಿರ್ಮಾಣ ಮತ್ತು ನಿರ್ದೇಶನದ 'ತಾರೆ ಜಮೀನ್ ಪರ್' ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರೆ, ನೀರಜ್ ಪಾಂಡೆ 'ಎ ವೆನ್ಸ್‌ಡೆ' ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಬಗಲಿಗಿಳಿಸಿಕೊಂಡಿದ್ದಾರೆ.

ಎ ವೆನ್ಸ್‌ಡೆ ಚಿತ್ರ, ಮತ್ತು ಟಿಂಗ್ಯಾ ಮರಾಠಿ ಚಿತ್ರ ಕ್ರಮವಾಗಿ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಬೆಳ್ಳಿ ಮತ್ತು ಕಂಚು ಪದಕ ಪಡೆದಿವೆ. ಅಮಿರ್ ಖಾನ್ ಮತ್ತು ಅಶುತೋಶ್ ಗೌರಿಕರ್ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.

ತಾರೆ ಜಮೀನ್ ಪರ್ ಚಿತ್ರದಲ್ಲಿ ನೀಡಿದ ಮನೋಜ್ಞ ಅಭಿನಯಕ್ಕಾಗಿ ಬಾಲನಟ ದರ್ಶೀಲ್ ಸಫಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಜೋಧಾ ಅಕ್ಬರ್ ಚಿತ್ರದಲ್ಲಿ ಜೋಧಾ ಆಗಿ ನಟಿಸಿದ ಐಶ್ವರ್ಯ ರೈ ಬಚ್ಚನ್ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಜೋಧಾ ಚಿತ್ರಕ್ಕಾಗಿ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ.

ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಮತ್ತು ವಿ ಶಾಂತಾರಾಮ್ ಮೋಶನ್ ಪಿಕ್ಚರ್ಸ್ ಫೌಂಡೇಷನ್ ಜಂಟಿಯಾಗಿ 1993ರಲ್ಲಿ ಸ್ಥಾಪಿಸಿದೆ. ಹಿಂದಿ ಸೇರಿದಂತೆ ಎಲ್ಲ ಭಾಷಾ ಚಿತ್ರಗಳನ್ನು ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. 'ಗುಲಾಬಿ ಟಾಕೀಸ್'ಗಾಗಿ ಗಿರೀಶ್ ಕಾಸರವಳ್ಳಿ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಕನ್ನಡದಿಂದ ಇದೊಂದೇ ಚಿತ್ರ ನಾಮನಿರ್ದೇಶನವಾಗಿತ್ತು.

ಪ್ರಶಸ್ತಿಗಳ ವಿವರ

ಅತ್ಯುತ್ತಮ ಚಿತ್ರ

ಬಂಗಾರ : ತಾರೆ ಜಮೀನ್ ಪರ್
ಬೆಳ್ಳಿ : ಎ ವೆನ್ಸ್‌ಡೆ
ಕಂಚು : ಟಿಂಗ್ಯಾ (ಮರಾಠಿ)

ಅತ್ಯುತ್ತಮ ನಿರ್ದೇಶನ

ಬಂಗಾರ : ನೀರಜ್ ಪಾಂಡೆ (ಎ ವೆನ್ಸ್‌ಡೆ)
ಬೆಳ್ಳಿ : ತಾರೆ ಜಮೀನ್ ಪರ್ (ಅಮೀರ್ ಖಾನ್)
ಕಂಚು : ಅಶುತೋಶ ಗೌರಿಕರ್ (ಜೋಧಾ ಅಕ್ಬರ್)

ಇತರೆ ಪ್ರಶಸ್ತಿಗಳು

ಅತ್ಯುತ್ತಮ ನಟ : ದರ್ಶೀಲ್ ಸಫಾರಿ (ತಾರೆ ಜಮೀನ್ ಪರ್)
ಅತ್ಯುತ್ತಮ ನಟಿ : ಐಶ್ವರ್ಯ ರೈ ಬಚ್ಚನ್ (ಜೋಧಾ ಅಕ್ಬರ್)
ಅತ್ಯುತ್ತಮ ಪೋಷಕ ನಟ/ನಟಿ : ಜಿಮ್ಮಿ ಶೆರ್ಗಿಲ್ (ಎ ವೆನ್ಸ್‌ಡೆ)
ಅತ್ಯುತ್ತಮ ಸಂಗೀತ : ಎಆರ್ ರೆಹಮಾನ್ (ಜೋಧಾ ಅಕ್ಬರ್)
ಅತ್ಯುತ್ತಮ ನಿರ್ದೇಶಕ (ಪ್ರಥಮ ಚಿತ್ರ) : ನೀರಜ್ ಪಾಂಡೆ (ಎ ವೆನ್ಸ್‌ಡೆ)
ಅತ್ಯುತ್ತಮ ನಟ (ಪ್ರಥಮ ಚಿತ್ರ) : ಫರ್ಹಾನ್ ಅಖ್ತರ್ (ರಾಕ್ ಆನ್)
ಅತ್ಯುತ್ತಮ ಚಿತ್ರಕಥೆ : ಅಮೋಲ್ ಗುಪ್ತೆ (ತಾರೆ ಜಮೀನ್ ಪರ್)
ಅತ್ಯುತ್ತಮ ಛಾಯಾಗ್ರಹಣ : ಕಿರಣ್ ದೇವ್ ಹಂಸ್ (ಜೋಧಾ ಅಕ್ಬರ್)
ಅತ್ಯುತ್ತಮ ಸಂಕಲನ : ಸಿ ನಾರಾಯಣ್ ಸಿಂಗ್ (ಎ ವೆನ್ಸ್‌ಡೆ)
ಅತ್ಯುತ್ತಮ ಶಬ್ದ ಗ್ರಹಣ : ದಿ. ಶ್ರೀಧರ್ (ದೇವಸ್ಥಾನಂ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada