»   »  ಚಕ್ಕರ್ ಹಾಕುವುದರಲ್ಲಿ ಅಂದ್ರಿತಾಗೆ ಮೊದಲ ಸ್ಥಾನ

ಚಕ್ಕರ್ ಹಾಕುವುದರಲ್ಲಿ ಅಂದ್ರಿತಾಗೆ ಮೊದಲ ಸ್ಥಾನ

Subscribe to Filmibeat Kannada
ಕನ್ನಡ ಚಿತ್ರರಂಗದ ನವ ತಾರೆ ಅಂದ್ರಿತಾ ರೇ ಕಾಲೇಜಿಗೆ ಚಕ್ಕರ್ ಹೊಡೆದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಡಾ. ಬಿ ಆರ್ ಅಂಬೇಡ್ಕರ್ ಡೆಂಟಲ್ ಕಾಲೇಜಿನ ಪ್ರಾಂಶುಪಾಲರು ಅಂದ್ರಿತಾ ರೇ ಬಗ್ಗೆ ಗರಂ ಆಗಿದ್ದಾರಂತೆ. ನೀನು ಹೀಗೇ ಚಕ್ಕರ್ ಹೊಡೀತಿದ್ದರೆ ಪರೀಕ್ಷೆಗೆ ಕೂರಿಸುವುದಿಲ್ಲ ಎಂದೂ ಹೆದರಿಸಿದ್ದಾರೆ. ಆದರೆ ಅಂದ್ರಿತಾ ರೇ ಮಾತ್ರ ಇದ್ಯಾವುದಕ್ಕೂ ಕಿವಿ ಕೊಡುತ್ತಿಲ್ಲ.

ಜಂಗ್ಲಿ ಚಿತ್ರದ ನಂತರಚಿಗರೆ ಕಂಗಳ ಚೆಲುವೆ ಅಂದ್ರಿತಾಗೆ ಬಹಳಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ. ಯೋಗರಾಜ ಭಟ್ಟರ 'ಮನಸಾರೆ' ಚಿತ್ರ ಸೇರಿದಂತೆ ಐದು ಕನ್ನಡಚಿತ್ರಗಳು ಅಂದ್ರಿತಾರ ಕೈಯಲ್ಲಿವೆ. ಹಾಗಾಗಿ ಅತ್ತ ಕಾಲೇಜು ಇತ್ತ ಚಿತ್ರೀಕರಣದ ನಡುವೆ ಅಂದ್ರಿತಾ ಹೈರಾಣಾಗಿದ್ದಾರೆ. ಹೇಗಾದರೂ ಮಾಡಿ ತರಗತಿಗಳಿಗೆ ಹಾಜರಾಗಿ ಹಾಜರಾತಿಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಶಾಲೆ ಗೆ ಚಕ್ಕರ್ ಹಾಕುವ ವಿಚಾರದಲ್ಲಿ ಕನಸು ಕಂಗಳ ಚೆಲುವೆ ಅಮೂಲ್ಯ ಮಾತ್ರ ಒಂಚೂರು ಕಟ್ಟುನಿಟ್ಟು. ನಿರ್ಮಲಾ ರಾಣಿ ಶಾಲೆಯಿಂದ ಎಸ್ಸೆಸ್ಸೆಲ್ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಅಮೂಲ್ಯ ಈಗ ಕಾಲೇಜು ಹುಡುಗಿ.ಶಾಲಾ ದಿನಗಳಲ್ಲಿ ಹೆಚ್ಚು ಸಮಯ ಸಿಗುತ್ತಿರಲಿಲ್ಲ. ರಜೆ ದಿನಗಳಲ್ಲಿ ಮಾತ್ರ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಿದ್ದೆ. ಉಳಿದಂತೆ ನನ್ನ ಓದಿನ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದೆ. ಈಗ ಕಾಲೇಜು ಮೆಟ್ಟಿಲು ಹತ್ತಿರುವುದರಿಂದ ಸಿನಿಮಾ ಕಡೆಗೆ ಗಮನ ಕೊಡಲು ಸ್ವಲ್ಪ ಹೆಚ್ಚಿನ ಸಮಯ ಸಿಗುತ್ತಿದೆ. ಹಾಗಾಗಿ ಕಾಲೇಜಿಗೆ ಚಕ್ಕರ್ ಹೊಡೆಯುವ ವಿಚಾರವೇ ಇಲ್ಲ ಎನ್ನುತ್ತಾರೆ ಅಮೂಲ್ಯ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada