»   » ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಭಾರ್ಗವ

ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಭಾರ್ಗವ

Posted By:
Subscribe to Filmibeat Kannada

ಜನಪ್ರಿಯ ಚಲನಚಿತ್ರ ನಿರ್ದೇಶಕ ಎಚ್ ಆರ್ ಭಾರ್ಗವ ಅವರನ್ನು 2008-09ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಸರ್ಕಾರ ತೀರ್ಮಾನಿಸಿದೆ. ಭಾರ್ಗವ ಅವರು ಸುಮಾರು 50 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2008-09ನೇ ಸಾಲಿನ ರಾಜ್ಯ ಪ್ರಶಸ್ತಿಗಾಗಿ 74 ಚಿತ್ರಗಳು ಸ್ಪರ್ಧಿಸಿವೆ. ರಾಜ್ಯ ಪ್ರಶಸ್ತಿಗಾಗಿ ದಾಖಲೆ ಸಂಖ್ಯೆಯ ಚಿತ್ರಗಳು ಸ್ಪರ್ಧಿಸಿರುವುದು ಕನ್ನಡ ಚಲಚಿತ್ರಇತಿಹಾಸಲ್ಲಿ ಇದೇ ಮೊದಲು.

ಭಾರ್ಗವ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಬಾಬು ದಿನಕರ್, ನಿರ್ದೇಶಕರಾದ ಕೆ ವಿ ರಾಜು ಹಾಗೂ ಡಿ ರಾಜೇಂದ್ರ ಬಾಬು, ಜಾನಪದ ಗಾಯಕ ಬಾನಂದೂರು ಕೆಂಪಯ್ಯ, ಹಿರಿಯ ನಟ ಹಾಗೂ ಬಿಜೆಪಿ ಧುರೀಣ ರಾಜೇಶ್, ಪ್ರಸಿದ್ಧ ಛಾಯಾಗ್ರಾಹಕ ಬಿ ಎಸ್ ಬಸವರಾಜ್, ರಂಗಭೂಮಿ ಕಲಾವಿದೆ ಸುಜಾತ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಗಳು ಇರುತ್ತಾರೆ.

ಸ್ಪರ್ಧೆಯಲ್ಲಿ ಶತದಿನೋತ್ಸವ ಆಚರಿಸಿಕೊಂಡ ಚಿತ್ರಗಳ ಜೊತೆಗೆ ಹೆಚ್ಚಾಗಿ ಹೊಸಬರ ಚಿತ್ರಗಳು ಇವೆ. ಐದು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದ ಮೊಗ್ಗಿನ ಮನಸು, ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದ್ದ ತುಳು ಚಿತ್ರ ಗಗ್ಗರ, ಪಿ ಶೇಷಾದ್ರಿ ಅವರ ವಿಮುಕ್ತಿ ಹಾಗೂ ಎಂ ಎಸ್ ಸತ್ಯು ಅವರ ಇಜ್ಜೋಡು ಸಹ ಪ್ರಶಸ್ತಿಗಾಗಿ ಸ್ಪರ್ಧಿಸಿವೆ.

ಸಹಾಯಧನಕ್ಕಾಗಿ 101 ಚಿತ್ರಗಳು
ಕನ್ನಡ ಚಿತ್ರಗಳಿಗೆ ಸಹಾಯಧನ ನೀಡುವ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನಿರ್ದೇಶಕ ಮತ್ತು ಸಾಹಿತಿ ಸಿ ವಿ ಶಿಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಹಾಯಧನಕ್ಕಾಗಿ 101 ಚಿತ್ರಗಳು ಅರ್ಜಿ ಸಲ್ಲಿಸಿರುವುದು ವಿಶೇಷ. ಈ ಎಲ್ಲಾ ಚಿತ್ರಗಳಲ್ಲಿ ಕೇವಲ 50 ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಚಿತ್ರಗಳಿಗೆ ತಲಾ ರು.10 ಲಕ್ಷ ಸಹಾಯಧನ ಸಿಗಲಿದೆ.

ಕೆ ವಿ ಗುಪ್ತಾ, ಎಚ್ ಎಂ ಕೆ ಮೂರ್ತಿ,ಪ್ರೊ. ಎಚ್ ಜಿ ಸಿದ್ದರಾಮಯ್ಯ, ಎಚ್ ಆರ್ ಮಧುಸೂದನ ರೆಡ್ಡಿ, ಹಿರಿಯ ಪತ್ರಕರ್ತೆ ಡಾ.ಆರ್ ಪೂರ್ಣಿಮಾ, ಹಿರಿಯ ನಟಿ ಬಿ ವಿ ರಾಧಾ ಹಾಗೂ ಕರ್ನಾಟಕ ಚಲನಚಿತ್ರ ಅಧ್ಯಕ್ಷರು ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆ ನಿರ್ದೇಶಕರು ಸದಸ್ಯರಾಗಿರುತ್ತಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada