»   » ನಗೆಯ ರಸದೌತಣ ಉಲ್ಲಾಸ ಉತ್ಸಾಹ

ನಗೆಯ ರಸದೌತಣ ಉಲ್ಲಾಸ ಉತ್ಸಾಹ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪರಿಶುದ್ಧ ಮನೋರಂಜನೆಯನ್ನೊಳಗೊಂಡಿರುವ ಈ ಚಿತ್ರ ನೋಡುಗರಿಗೆ ನಗೆಯ ರಸದೌತಣ ನೀಡಲಿದೆ.

ಕನ್ನಡದವರಾದ ಯಶೋಸಾಗರ್ ಹಾಗೂ ಸ್ನೇಹಾ ಉಲ್ಲಾಳ್ ಅಭಿನಯದಲ್ಲಿ ತೆಲುಗು ಭಾಷೆಯಲ್ಲಿ ಅತ್ಯಂತ ಯಶಸ್ಸು ಕಂಡ ಚಿತ್ರ 'ಉಲ್ಲಾಸಂಗ ಉತ್ಸಾಹಂಗ'. ಇದೇ ಚಿತ್ರ ಕನ್ನಡದಲ್ಲಿ 'ಉಲ್ಲಾಸ ಉತ್ಸಾಹ ಶೀರ್ಷಿಕೆಯಿಂದ ನಿರ್ಮಾಣವಾಗಿದೆ ಕಾಂತಿಸಿನಿ ಕ್ರಿಯೇಷನ್ಸ್ ಮೂಲಕ. ಬಿ.ಪಿ.ಸೋಮು ಹಾಗೂ ಬಿ.ಪಿ.ತ್ಯಾಗರಾಜ್ ನಿರ್ಮಿಸಿರುವ ಈ ಚಿತ್ರವನ್ನು ದೇವರಾಜ್‌ಪಾಲನ್ ನಿರ್ದೇಶಿಸಿದ್ದಾರೆ.

ಜಿ.ವಿ.ಪ್ರಕಾಶ್‌ಕುಮಾರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಕರುಣಾಕರನ್ ಕಥೆ ಬರೆದಿದ್ದಾರೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಇಮ್ರಾನ್ ನೃತ್ಯ, ರವಿಶಂಕರ್, ದತ್ತಣ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರ್ರದ ತಾರಾಬಳಗದಲ್ಲಿ ಗಣೇಶ್, ಯಾಮಿಗೌತಮಿ, ರಂಗಾಯಣರಘು, ಸಾಧುಕೋಕಿಲಾ, ತುಳಸಿಶಿವಮಣಿ, ಪ್ರೀತಿಚಂದ್ರಶೇಖರ್, ದೊಡ್ಡಣ್ಣ, ವಿಶ್ವ, ಮಿತ್ರ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada