For Quick Alerts
  ALLOW NOTIFICATIONS  
  For Daily Alerts

  ಚಿತ್ರನಟಿ ರಂಭಾ ಮನೆ ಮೇಲೆ ಸೆಕ್ಯುರಿಟಿಗಳ ದಾಂಧಲೆ

  By Rajendra
  |

  ಚಿತ್ರನಟಿ ರಂಭಾ ಅವರ ಚೆನ್ನೈ ಮನೆ ಮೇಲೆ ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳು ಆಕ್ರಮಣ ಮಾಡಿದ ಘಟನೆ ಮಂಗಳವಾರ (ಡಿ.28) ನಡೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಯಲ್ಲಿನ ಬೆಲೆಬಾಳುವ ವಸ್ತುಗಳಿಗೆ ಸೆಕ್ಯುರಿಟಿ ಗಾರ್ಡ್‌ಗಳು ಹಾನಿ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

  ಈ ಘಟನೆ ನಡೆದಾಗ ರಂಭಾ ಅವರು ಮನೆಯಲ್ಲಿ ಇರಲಿಲ್ಲವಂತೆ. ರಂಭಾ ಮನೆಯ ಸನಿಹದಲ್ಲೇ ಕೆಲಸ ಮಾಡುತ್ತಿದ್ದ ನಾಲ್ಕು ಮಂದಿ ಸೆಕ್ಯುರಿಟಿ ಗಾರ್ಡ್‌ಗಳು ಕುಡಿದು ತಮ್ಮತಮ್ಮಲ್ಲೇ ಜಗಳ ಮಾಡಿಕೊಂಡು ದಾಂಧಲೆ ನಡೆಸಿದ್ದಾರೆ. ರಂಭಾ ಮನೆಯ ಕಾವಲುಗಾರನೊಂದಿಗೆ ಮಾತಿನ ಚಕಮಕಿ ನಡೆದು ಬಳಿಕ ಕಲ್ಲು ತೂರಿ ದಾಂಧಲೆ ಮಾಡಿದ್ದಾಗಿ ದೂರಲಾಗಿದೆ.

  ರಂಭಾ ಅವರ ಮನೆಯ ಪಡಸಾಲೆ ಹಾಗೂ ಪೀಠೋಪಕರಣಗಳು ಹಾನಿಗೊಳಗಾಗಿವೆ ಎಂದು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಲಾಗಿದೆ. ಅಂದಹಾಗೆ ರಂಭಾ ಅವರು ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಭಾವ ಭಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. [ರಂಭಾ]

  English summary
  Actress Ranbha"s Chennai house was ransacked by some private security guards yesterday. According to the police complaint filed by security, the guards entered in to Rambha"s Chennai house and damaged the properties due to some personal reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X