»   » 'ಚಿರು'ಗೆ ಜೊತೆಯಾದ ಕೃತಿ ಕರಬಂದ

'ಚಿರು'ಗೆ ಜೊತೆಯಾದ ಕೃತಿ ಕರಬಂದ

Posted By:
Subscribe to Filmibeat Kannada

ಹೀರೋ ಹೆಸರಲ್ಲಿ ಈಗಾಗಲೆ ಸಾಕಷ್ಟು ಚಿತ್ರಗಳು ಬಂದಿವೆ. ಇದೀಗ ಈ ಸಾಲಿಗೆ ಹೊಸದಾಗಿ 'ಚಿರು' ಚಿತ್ರ ಸೇರ್ಪಡೆಯಾಗುತ್ತಿದೆ. ಚಿತ್ರದ ನಾಯಕ ನಟ ಚಿರಂಜೀವಿ ಸರ್ಜಾ. ಅವರನ್ನು ಅವರ ಮನೆಯಲ್ಲಿ ಹಾಗೂ ಗೆಳೆಯರ ಬಳಗದಲ್ಲಿ ಪ್ರೀತಿಯಿಂದ 'ಚಿರು' ಎಂದು ಕರೆಯುತ್ತಾರಂತೆ. ಹಾಗಾಗಿ ಚಿತ್ರಕ್ಕೆ ಅದೇ ಶೀರ್ಷಿಕೆಯನ್ನು ಇಡಲಾಗಿದೆ.

ಇದೊಂದು ಮನರಂಜನೆಯ ಅಂಶಗಳನ್ನು ಒಳಗೊಂಡ ಪ್ರೇಮ ಕತೆ.ಈ ಚಿತ್ರದ ಮೂಲಕ ನಾಯಕಿಯಾಗಿ ಕೃತಿ ಕರಬಂದ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಮೂಲತಃ ಪಂಜಾಬಿನವರಾದ ಈಕೆ ಬೆಳೆದದ್ದು ನವದೆಹಲಿಯಲ್ಲಿ. ಓದಿದ್ದು ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜು ಹಾಗೂ ಜೆ ಡಿ ಇನಿಸ್ಟಿಟ್ಯೂಪ್ ಆಫ್ ಫ್ಯಾಶನ್ ಟೆಕ್ನಾಲಜಿಯಲ್ಲಿ. ಬಳಿಕ ಪ್ರಸಿದ್ಧ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಝೇಂಕಾರ್ ಮೂವೀಸ್ ನ ಸುರೇಶ್ ಜೈನ್ ಚಿತ್ರದ ನಿರ್ಮಾಪಕರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ 'ಆಕಾಶ್' ನಂತಹ ಹಿಟ್ ಚಿತ್ರ ಕೊಟ್ಟ ಮಹೇಶ್ ಬಾಬು ಚಿತ್ರದ ನಿರ್ದೇಶಕರು. ಮುರಿದ ಮನಸುಗಳು ಬದಲಾಗುವ ಸನ್ನಿವೇಶಗಳೊಂದಿಗೆ ಮತ್ತೆ ಒಂದಾಗುತ್ತವೆ. ಭಾವನಾತ್ಮಕ ಸನ್ನಿವೇಶಗಳಿಗೆ ಮತ್ತ್ತಷ್ಟು ಜೀವ ತುಂಬಲು ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎನ್ನುತ್ತಾರೆ ಮಹೇಶ್ ಬಾಬು.

ಈ ಮುಂಚಿನ ತಮ್ಮ ಎರಡು ಚಿತ್ರಗಳಿಗಿಂತ 'ಚಿರು' ಭಿನ್ನವಾಗಿರುತ್ತದೆ. ಚಿತ್ರದಲ್ಲಿನ ಭಾವನಾತ್ಮಕ ಅಂಶಗಳನ್ನು ಪ್ರೇಕ್ಷರಿಗೆ ತಲುಪಿಸುವಲ್ಲಿ ಹೆಚ್ಚು ಕಾಳಜಿ ವಹಿಸಿದ್ದೇವೆ ಎಂದು ಚಿತ್ರದ ನಾಯಕ ನಟ ಚಿರಂಜೀವಿ ಸರ್ಜಾ ತಿಳಿಸಿದ್ದಾರೆ. ಸುಂದರನಾಥ ಸುವರ್ಣ ಅವರ ಛಾಯಾಗ್ರಹಣ, ಗಿರಿಧರ್ ದಿವಾನ್ ಅವರ ಸಂಗೀತ ಚಿತ್ರಕ್ಕಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada