For Quick Alerts
  ALLOW NOTIFICATIONS  
  For Daily Alerts

  ತಮಿಳು, ತೆಲುಗಿಗೆ ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ

  By Rajendra
  |

  ಇನ್ನೂ ನಿರ್ಮಾಣ ಹಂತದಲ್ಲಿರುವ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಅವರ ವಿಭಿನ್ನ 'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರಕ್ಕೆ ನೆರೆ ರಾಜ್ಯಗಳು ತೀವ್ರ ಕುತೂಹಲ ವ್ಯಕ್ತಪಡಿಸಿವೆ. ಈ ಚಿತ್ರವನ್ನು ತೆಲುಗು ಮತ್ತು ತಮಿಳು ಭಾಷೆಗೆ ರೀಮೇಕ್ ಮಾಡಲು ಮುಂದಾಗಿದ್ದಾರೆ. ನಿಧಿ ಸುಬ್ಬಯ್ಯ, ಕರೀಷ್ಮಾ ತನ್ನಾ, ಸಂಜನಾ, ಅಮಿತಾ, ಕೃತಿಕಾ ಮತ್ತು ಯುಕ್ತಿ ಚಿತ್ರದಲ್ಲಿನ ಅರ್ಧ ಡಜನ್ ನಾಯಕಿಯರು.

  ಇತ್ತೀಚೆಗೆ ಈ ಚಿತ್ರದ ಡಿಟಿಎಸ್ ಮಿಕ್ಸಿಂಗ್ ಚೆನ್ನೈನಲ್ಲಿ ನಡೆಯಿತು. ಅಲ್ಲೇ ಇದ್ದ ತಮಿಳಿನ ಸಂತೋಷ್ ಶಿವನ್ ಅವರು ಚಿತ್ರದ ಕಥಾ ಹಂದರವನ್ನು ಕೇಳಿ ಚಿತ್ರದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ತಮಿಳುಗೂ ತರುವುದಾಗಿ 'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ನಿರ್ಮಾಪಕ ರವೀಂದ್ರ ಅವರನ್ನು ಕೇಳಿದರಂತೆ. ಆಗಲಿ ಎಂದಿದ್ದಾರೆ ಎಂಬುದು ಸುದ್ದಿ.

  ತೆಲುಗು, ಚಿತ್ರರಂಗದಿಂದಲೂ ತಮ್ಮ ಚಿತ್ರಕ್ಕೆ ಭಾರಿ ಬೇಡಿಕೆ ಬರುತ್ತಿದೆ ಎಂದು ನಿರ್ಮಾಪಕ ರವೀಂದ್ರ ತಿಳಿಸಿದ್ದಾರೆ. ಚಿತ್ರಕ್ಕೆ ವಿಭಿನ್ನ ಪ್ರಚಾರ ತಂತ್ರವನ್ನೂ ಅನುಸರಿಸುತ್ತಿರುವ ರವೀಂದ್ರ ಅವರು, ಕೇವಲ ಪ್ರಚಾರ ತಂತ್ರವಿದ್ದರಷ್ಟೇ ಸಾಲದು ಚಿತ್ರಕತೆಯಲ್ಲೂ ಧಂ ಇರಬೇಕು ಎಂದಿದ್ದಾರೆ. ಚಿತ್ರದಲ್ಲಿ ತುಟಿ ತುಟಿ ಚುಂಬನ ಎಂಥದೂ ಇಲ್ಲ. ಮನೆ ಮಂದಿಯಲ್ಲಾ ಕುಳಿತು ನೋಡಬಹುದಾದ ಚಿತ್ರ ಇದು ಎಂದು ನಾಯಕ ನಟ ಪ್ರೇಮ್ ಕುಮಾರ್ ಕೂಡ ಧ್ವನಿ ಸೇರಿಸಿದ್ದಾರೆ.

  English summary
  Lovely Star Premkumar lead film ‘I am Sorry Mathe Banni Prisona’ by Ravindra is very much in demand for Tamil and Telugu remake. Santosh Shivan after knowing the contents in the studios in Chennai when it was processing for DTS mixing spoke to director cum producer Ravindra for the remake rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X