»   » ಸಪೂರ ದೇಹದ ಸುಂದರಿ ರಾಗಿಣಿ ದ್ವಿವೇದಿ

ಸಪೂರ ದೇಹದ ಸುಂದರಿ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada

'ಈ ಶತಮಾನದ ವೀರ ಮದಕರಿ' ಚಿತ್ರದ ಬಳಿಕ ನಟಿಯಾಗಿ ಬದಲಾದ ರೂಪದರ್ಶಿ ರಾಗಿಣಿಗೆ ಅವಕಾಶಗಳು ಬಾಗಿಲು ತಟ್ಟುತ್ತಿವೆ. ಸಿಕ್ಕ ಅವಕಾಶಗಳನ್ನು ಸದ್ವಿನಿಯೋಗಪಡಿಸಿಕೊಳ್ಳುವಲ್ಲಿ ರಾಗಿಣಿ ಮುಂದಡಿಯಿಟ್ಟಿದ್ದಾರೆ. ದೇಹದ ತೂಕವನ್ನು ಇಳಿಸಿಕೊಂಡಿರುವ ರಾಗಿಣಿ ಈಗ ಸಪೂರ ಸುಂದರಿಯಾಗಿ ಬದಲಾಗಿದ್ದಾರೆ.

ಏಳು ಕೇಜಿಯಷ್ಟು ತೂಕ ಕಡಿಮೆ ಮಾಡಿಕೊಂಡು ತೆಳ್ಳಗೆ ಬಳುಕುವ ಬಳ್ಳಿಯಂತಾಗಿದ್ದಾರೆ. ಸಾಕಷ್ಟು ಶ್ರಮ ಮತ್ತು ಸಂತೋಷವಾಗಿರುವುದೇ ನನ್ನ ಸೌಂದರ್ಯ ರಹಸ್ಯ ಎನ್ನುವ ರಾಗಿಣಿ ಸದ್ಯಕ್ಕೆ 'ಗಂಡೆದೆ' ಚಿತ್ರದ ನಾಯಕಿ. ರಾಮು ನಿರ್ಮಿಸುತ್ತಿರುವ ಈ ಚಿತ್ರದ ನಾಯಕ ನಟ ಚಿರಂಜೀವಿ ಸರ್ಜಾ.

ದಕ್ಷಿಣದ ಉಳಿದ ಭಾಷೆಗಳಲ್ಲೂ ರಾಗಿಣಿಗೆ ಅವಕಾಶಗಳು ಕೈ ಬೀಸಿ ಕರೆಯುತ್ತಿವೆ. ಕಾಲೇಜು ದಿನಗಳಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯೂ ಆಗಿದ್ದ ರಾಗಿಣಿಯ 'ಹೋಲಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 'ಗೋಕುಲ' ಚಿತ್ರದ ಐಟಂ ಹಾಡಿನಲ್ಲೂ ರಾಗಿಣಿ ಕುಣಿದಿದ್ದರು. ವಿಜಯ್ ಜತೆ 'ಶಂಕರ್ ಐಪಿಎಸ್' ಹಾಗೂ 'ವೀರಬಾಹು' ಚಿತ್ರಗಳಲ್ಲೂ ರಾಗಿಣಿ ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada