twitter
    For Quick Alerts
    ALLOW NOTIFICATIONS  
    For Daily Alerts

    ತೀವ್ರ ಆಕ್ಷೇಪಕ್ಕೆ ಮಣಿದು ಒನಕೆ ಕೈಬಿಟ್ಟ ಓಬವ್ವ

    By Rajendra
    |

    ಲೇಡಿ ಬ್ರೂಸ್ಲಿ ಖ್ಯಾತಿಯ ಆಯೇಷಾ ಮುಖ್ಯಭೂಮಿಕೆಯಲ್ಲಿರುವ ಚಿತ್ರ 'ಓಬವ್ವ'. ಈ ಹಿಂದೆ ಈ ಚಿತ್ರಕ್ಕೆ 'ಒನಕೆ ಓಬವ್ವ' ಎಂದು ಹೆಸರಿಡಲಾಗಿತ್ತು. ಈ ಶೀರ್ಷಿಕೆಗೆ ನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶೀರ್ಷಿಕೆಯನ್ನು 'ಓಬವ್ವ' ಎಂದು ಬದಲಾಯಿಸಲಾಗಿದೆ.

    ಚಿತ್ರದುರ್ಗದ ಒನಕೆ ಓಬವ್ವ ಇತಿಹಾಸ ಪ್ರಸಿದ್ಧ ವ್ಯಕ್ತಿಯಾಗಿದ್ದು, ಕರ್ನಾಟಕದ ಮನೆಮಾತಾದ ವೀರವನಿತೆ. ಯಾವುದೇ ಆಕ್ಷನ್ ಚಿತ್ರ ಒಂದಕ್ಕೆ ಆಕೆಯ ಹೆಸರಿಡುವುದು ಇತಿಹಾಸಕ್ಕೆ ಬಗೆದ ದ್ರೋಹ ಹಾಗೂ ಚಿತ್ರರಂಗದವರ ಬೌದ್ಧಿಕ ದಾರಿದ್ರ್ಯಕ್ಕೆ ಜ್ವಲಂತ ಸಾಕ್ಷಿ ಎಂದು ಕತೆಗಾರ, ಲೇಖಕ ಬಿ ಎಲ್ ವೇಣು ಸೇರಿದಂತೆ ಹಲವರು ಆಕ್ಷೇಪಿಸಿದ್ದರು.

    ಈ ಬಗ್ಗೆ ಚಿತ್ರತಂಡ ಪತ್ರಿಕಾ ಪ್ರಕಟಣೆಯನ್ನೂ ನೀಡಿದೆ. "ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾರ್ಗದರ್ಶನದಂತೆ ಒನಕೆ ಎಂಬ ಪದವನ್ನು ಕೈ ಬಿಟ್ಟಿರುತ್ತೇವೆ. ಇದರಿಂದ ಯಾರ ಮನಸಿಗಾಗಲಿ ಅಥವಾ ಯಾವುದೇ ಸಂಘ ಸಂಸ್ಥೆಗಾಗಲಿ ನೋವಾಗಿದ್ದರೆ ನಮ್ಮ ಚಿತ್ರತಂಡ ಕ್ಷಮೆ ಕೇಳುತ್ತದೆ" ಎಂದಿದ್ದಾರೆ.

    ಅಂದಹಾಗೆ ಈ ಚಿತ್ರದ ಅಡಿಬರಹ ಕೂಡ ವಿಚಿತ್ರವಾಗಿದೆ. ಸೈಲೆಂಟ್ ಆದ್ರೆ ಅನಂತನಾಗ್...ವೈಲೆಂಟ್ ಆದ್ರೆ ಶಂಕರ್ ನಾಗ್...ಎಂಬುದು. ಶೀರ್ಷಿಕೆಯಲ್ಲೇನೋ ಒನಕೆ ಪದವನ್ನು ಕೈಬಿಟ್ಟಿದ್ದಾರೆ, ಆದರೆ ಚಿತ್ರದಲ್ಲಿ ಮಾತ್ರ ಒನಕೆ ಇದ್ದೇ ಇದೆ ಎಂಬುದು ವಿಶೇಷ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Kannada movie Onake Obavva titled now changed as Obavva. The famous writer of Chitradurga B.L.Venu has taken strong objection to 'Onake Obavva' the Brave Woman of Chitradurga.
    Friday, July 29, 2011, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X