»   »  ಗಣೇಶ್ ಮತ್ತು ಶಿಲ್ಪಾ ದಂಪತಿಗಳಿಗೆ ಹೆಣ್ಣು ಮಗು

ಗಣೇಶ್ ಮತ್ತು ಶಿಲ್ಪಾ ದಂಪತಿಗಳಿಗೆ ಹೆಣ್ಣು ಮಗು

Subscribe to Filmibeat Kannada
ವಿರೋಧಿ ನಾಮ ಸಂವತ್ಸವರದ ಯುಗಾದಿ ಹಬ್ಬ ನಟ ಗಣೇಶ್ ಮತ್ತು ಶಿಲ್ಪಾ ದಂಪತಿಗಳನ್ನು ಸಂಭ್ರಮದಲ್ಲಿ ತೇಲಿಸಿದೆ. ಯುಗಾದಿ ದಿನ ಗಣೇಶ್ ರ ಪತ್ನಿ ಶಿಲ್ಪಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮನೆಗೆ ಹೊಸ ಸದಸ್ಯೆಯ ಆಗಮನ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

''ನನ್ನದೇ ಪ್ರತಿಬಿಂಬದಂತಿರುವ ಮಗುವಿನ ಮುಖ ನೋಡಿ ಒಂಥರಾ ಮೈಯಲ್ಲಾ ಜುಂ ಅಂತು ರೀ'' ಎಂದು ಗಣೇಶ್ ಪ್ರತಿಕ್ರಿಯಿಸಿದರು. ನಾನು ಗಣೇಶ ಚತುರ್ಥಿ ದಿನಹುಟ್ಟಿದ್ದಕ್ಕೆ ಗಣೇಶ್ ಎಂದು ನಾಮಕರಣ ಮಾಡಿದರು. ಮಗುವಿಗೆ ಏನು ಹೆಸರಿಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ, ಯೋಚಿಸುತ್ತಿದ್ದೇವೆ. ಸದ್ಯಕ್ಕೆ ನಂ ಯಜಮಾನ್ರು ಮಗುವನ್ನು ಚಿನ್ನ ಎಂದು ಕರೆಯುತ್ತಿದ್ದಾರೆ ಎಂದರು ಶಿಲ್ಪಾ ಗಣೇಶ್.

ಗಣೇಶ್ ಮನೆಗೆ ಹೊಸ ಸದಸ್ಯೆಯ ಆಗಮನದಿಂದ ಗಣೇಶ್ ಖುಷಿ ಇಮ್ಮಡಿಸಿದೆ. ಹೆಂಡತಿ, ಮಗಳೊಂದಿಗೆ ಕಳೆಯಲು ಗಣೇಶ್ ಒಂದು ತಿಂಗಳ ಕಾಲ ಚಿತ್ರೀಕರಣಕ್ಕೆ ರಜೆ ಹಾಕಿದ್ದಾರೆ. ಗಣೇಶ್ ಮತ್ತು ಶಿಲ್ಪಾ ದಂಪತಿಗಳಿಗೆ ಆಲ್ ದ ಬೆಸ್ಟ್ ಹೇಳೋಣ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದೂ ಓದಿ
ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!
ಗೋಲ್ಡನ್ ಸ್ಟಾರ್ ಗಣೇಶ್; ಚಾಪ್ಲಿನ್ ಆದಾಗ
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಗಣೇಶ್!
ಥಂಡ ಮತ್ಲಬ್ ಕೋಕಾ ಕೋಲದಲ್ಲಿ ಗಣೇಶ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada