»   » ಡಬ್ಬಿಂಗ್ ವಿರೋಧಿಸಿ ಚಿತ್ರೋದ್ಯಮ ಬಂದ್ ?

ಡಬ್ಬಿಂಗ್ ವಿರೋಧಿಸಿ ಚಿತ್ರೋದ್ಯಮ ಬಂದ್ ?

Posted By:
Subscribe to Filmibeat Kannada
Lava kusha movie still
ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಹೊಸ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದು, ಗಡಿ ಭಾಗದಲ್ಲಿ ಪುಕ್ಕಟೆ ಸಿನ್ಮಾ ತೋರಿಸುವುದು, ಕನ್ನಡ ಸಿನಿಮಾಕ್ಕೆ ತೆರಿಗೆ ವಿನಾಯಿತಿ, ಚಿತ್ರಮಂದಿರ ಸಿಬ್ಬಂದಿಗಳಿಗೆ ಸಿಹಿಲಾಡು ಹಂಚಿಕೆ..ಇತ್ಯಾದಿ ಘೋಷಣೆಗಳು ಕೇಳಿ ಬಂದಿದ್ದರೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ ರಾಜ್ಯೋತ್ಸವದ ಕೊಡುಗೆಯಾಗಿ ನ.1 ರಂದು 'ಚಿತ್ರೋದ್ಯಮ ಬಂದ್' ಮಾಡಲು ನಿರ್ದೇಶಕರ ಸಂಘ ಮುಂದಾಗಿರುವುದು ಅಭಿಮಾನದ ಪರಮಾವಧಿ ಎಂದೇ ಹೇಳಬಹುದು.

ಇಷ್ಟಕ್ಕೂ ಚಿತ್ರೋದ್ಯಮ ಬಂದ್ ಮಾಡುವಂತದ್ದು ಏನು ನಡೆಯಿತು? ಡಬ್ಬಿಂಗ್ ಹಾಗೂ ಪರಭಾಷೆ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಕನ್ನಡ ಪ್ರೇಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ಕನ್ನಡದ ಕಟ್ಟಾಳು ನಿರ್ದೇಶಕರು ಹೋರಾಟ ನಡೆಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಬೇಕಾದಾಗ ಹೋರಾಟ ನಡೆಸಿ, ಬೇಡದಿದ್ದಾಗ ಜಾಣ ಕುರುಡು ತೋರಿಸುವ ಕರ್ನಾಟಕ ವಾಣಿಜ್ಯ ಮಂಡಳಿ(ಕೆಎಫ್ ಸಿಸಿ) ಕೂಡ, ಡಬ್ಬಿಂಗ್ ಚಿತ್ರ ಎಂದರೆ ಮೈಮೇಲೆ ಎಗರಿಬೀಳುತ್ತದೆ. ಪರಿಸ್ಥಿತಿ ಹೀಗಿರುವಾಗ, ಸನ್ ನೆಟ್ ವರ್ಕ್ಸ್ ಮಾಲೀಕತ್ವದ ಉದಯಟಿವಿಯಲ್ಲಿ ನೆನ್ನೆ ರಾತ್ರಿ ಎನ್ ಟಿ ರಾಮರಾವ್ ಅಭಿನಯಾದ್ ತೆಲುಗಿನ 'ಲವ-ಕುಶ' ಚಿತ್ರದ ಡಬ್ಬಿಂಗ್ ಆವೃತ್ತಿಯನ್ನು ಪ್ರದರ್ಶಿಸಿದೆ. ಇದರಿಂದ ಕೆಂಡಾಮಂಡಲವಾದ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ , ಚಿತ್ರೋದ್ಯಮ ಬಂದ್ ಗೆ ಕರೆ ನೀಡೇ ಬಿಟ್ಟರು.

ಆದರೆ, ಎಲ್ಲವನ್ನೂ ಸಾವಧಾನದಿಂದ ಪರಿಶೀಲಿಸುವ ಕೆಎಫ್ ಸಿಸಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲರು, ಡಬ್ಬಿಂಗ್ ಚಿತ್ರ ಪ್ರದರ್ಶನ ಕಾನೂನು ಬಾಹಿರ ಕೆಲಸ. ಈ ಬಗ್ಗೆ ನಿರ್ದೇಶಕರ ಸಂಘ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಯಾವುದಕ್ಕೂ ನಿರ್ದೇಶಕರ ಸಂಘ, ಛಾಯಾಗ್ರಾಹಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಮುಂತಾದ ಸಂಘಗಳ ಪದಾಧಿಕಾರಿಗಳೊಡನೆ ಚರ್ಚಿಸಿ ನಂತರ ಕೆಎಫ್ ಸಿಸಿ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದಿದ್ದಾರೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |  ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ  | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada