»   »  ಬಿನ್ನಿಮಿಲ್ ನ ವಠಾರದ ಸೆಟ್ ನಲ್ಲಿ ಕಿಚ್ಚಹುಚ್ಚ

ಬಿನ್ನಿಮಿಲ್ ನ ವಠಾರದ ಸೆಟ್ ನಲ್ಲಿ ಕಿಚ್ಚಹುಚ್ಚ

Posted By:
Subscribe to Filmibeat Kannada
Ramya and Sudeep in Kichcha Huchcha
ಬಿಂದು ಶ್ರೀ ಫಿಲಂಸ್ ಮತ್ತು ಮಾರ್ಕ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ ಮಂಜು ಹಾಗೂ ಮಾರ್ಕ್ ವೆಲ್ ಬಾಲಾಜಿ ನಿರ್ಮಿಸುತ್ತಿರುವ ಅದ್ದೂರಿ 'ಕಿಚ್ಚಹುಚ್ಚ' ಚಿತ್ರದ ಚಿತ್ರೀಕರಣವು ಹತ್ತುದಿನಗಳ ಕಾಲ ಬೆಂಗಳೂರಿನಲ್ಲಿ ನಡೆದು ಈಗ ಮೈಸೂರಿನಲ್ಲಿ ಮುಂದುವರೆದಿದೆ.

ಚಿತ್ರಕ್ಕಾಗಿ ಬಿನ್ನಿಮಿಲ್ ನ ವಠಾರದ ಸೆಟ್ ನಲ್ಲಿ ಸುದೀಪ್, ರಮ್ಯಾ ಹಾಗೂ ನೂರಕ್ಕೂ ಹೆಚ್ಚು ಸಹಕಲಾವಿದರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ವೆಂಕಟ್ ಛಾಯಾಗ್ರಹಣದಲ್ಲಿ ನಿರ್ದೇಶಕ ಚಿ ಗುರುದತ್ ಚಿತ್ರಿಸಿಕೊಂಡರು. ಚಿತ್ರಕ್ಕೆ ಎಂ ಎಸ್ ರಮೇಶ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಎಸ್ ಮನೋಹರ್ ಸಂಕಲನ, ಇಸ್ಮಾಯಿಲ್ ಕಲೆ, ಸುರೇಶ್ ನಿರ್ಮಾಣ ನಿರ್ವಹಣೆಯಿದೆ.

ಚಿತ್ರವನ್ನು ಚಿ ಗುರುದತ್ ನಿರ್ದೇಶಿಸುತ್ತಿರುವ ಚಿತ್ರದ ತಾರಾಗಣದಲ್ಲಿ ಸುದೀಪ್, ರಮ್ಯಾ, ಶ್ರೀನಾಥ್, ರಂಗಾಯಣ ರಘು, ಅರವಿಂದ್, ಶ್ರೀಧರ್, ನಾರಾಯಣಸ್ವಾಮಿ, ರಾಕೇಶ್, ಚಂದ್ರು, ಅರುಣ ಬಾಲರಾಜ್, ವಿದ್ಯಾಮೂರ್ತಿ, ಗಿರಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada