»   » ದತ್ತುಪುತ್ರಿಯ 'ಖುಷಿ'ಯಲ್ಲಿ ಉಪೇಂದ್ರ

ದತ್ತುಪುತ್ರಿಯ 'ಖುಷಿ'ಯಲ್ಲಿ ಉಪೇಂದ್ರ

Posted By:
Subscribe to Filmibeat Kannada

ರಿಯಾಲ್ ಸ್ಟಾರ್ ಉಪೇಂದ್ರನಿಗೆ ಪುರಸೋತ್ತಿಲ್ಲದಷ್ಟು ಕೆಲಸ. 'ಸೂಪರ್' ಚಿತ್ರೀಕರಣ ಭರದಿಂದ ಮುನ್ನುಗ್ಗುತ್ತಿರುವುದೆ ಇದಕ್ಕೆ ಕಾರಣ. ಏತನ್ಮಧ್ಯೆ ಟಿವಿ ರಿಯಾಲಿಟಿ ಶೋ ಒಂದರಲ್ಲಿ ಉಪೇಂದ್ರ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಈ ರಿಯಾಲಿಟಿ ಶೋನ ತೀರ್ಪುಗಾರರು ಉಪೇಂದ್ರ ಅವರ ಧರ್ಮಪತ್ನಿ ಪ್ರೀಯಾಂಕ ಎಂಬುದು ವಿಶೇಷ!

ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ''ಸೂಪರ್ ಸ್ಟಾರ್ ಆಫ್ ಕರ್ನಾಟಕ''. ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆ ಉಪೇಂದ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಿಯಾಲಿಟಿ ಶೋನ ಸ್ಪರ್ಧಿಗಳ ದಯನೀಯ ಆರ್ಥಿಕ ಸ್ಥಿತಿ ತಿಳಿದುಕೊಂಡ ಉಪೇಂದ್ರ ಅವರಿಗೆ ನೆರವಾಗಿದ್ದಾರೆ. ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಸ್ಪರ್ಧಾಳುಗಳಿಗೆ ತಲಾ ರು.25,000 ಕೊಟ್ಟು ಖುಷಿ ಪಟ್ಟಿದ್ದಾರೆ.

ರಿಯಾಲಿಟಿ ಶೋನಲ್ಲಿ ಆರು ವರ್ಷದ ಬಾಲಕಿ ಖುಷಿಯ ಪ್ರದರ್ಶನ ಮೆಚ್ಚಿ ಆಕೆಗೂ ರು.25,000 ಧನ ಸಹಾಯ ಮಾಡಿ ಖುಷಿಪಟ್ಟಿದ್ದಾರೆ. ಆಕೆಯನ್ನು ದತ್ತು ತೆಗೆದುಕೊಳ್ಳುತ್ತಿರುವುದಾಗಿ ಉಪೇಂದ್ರ ತಿಳಿಸಿದರು ಎಂದು ಅವರ ಪತ್ನಿ ಪ್ರಿಯಾಂಕ ಉಪೇಂದ್ರ ತಿಳಿಸಿದ್ದಾರೆ. ರಿಯಲ್ ಸ್ಟಾರ್ ಮೇಲೆ ರಿಯಾಲಿಟಿ ಶೋ ಇಷ್ಟೊಂದು ಪ್ರಭಾವ ಬೀರಿರುವ ಬಗ್ಗೆ ಪ್ರಿಯಾಂಕ ಉಪೇಂದ್ರ ಸಹ ಖುಷಿಯಾಗಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada