Just In
Don't Miss!
- News
'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Education
KTIL Recruitment 2021: 38 ಡಿಟಿಸಿ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಟಿ ದಾಳಿ ಹಿನ್ನೆಲೆ; ಬೆಂಗಳೂರಿಗೆ ಮರಳಿದ ಅನುಷ್ಕಾ ಶೆಟ್ಟಿ
ಆದಾಯ ತೆರಿಗೆ ದಾಳಿ ಬಳಿಕ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ತುಂಬಾ ಬೇಜಾರಾಗಿದ್ದು ತವರಿಗೆ ಮರಳಲು ಮನಸ್ಸು ಮಾಡಿದ್ದಾರೆ. ಬೆಂಗಳೂರು ಹಾಗೂ ಹೈದರಾಬಾದಿನ ಅನುಷ್ಕಾ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದರು. ಇದರಿಂದಬೇಜಾರಾಗಿರುವ ಆಕೆ ಭಾರವಾದ ಮನಸ್ಸನ್ನು ಕೊಂಚ ಹಗುರ ಮಾಡಿಕೊಳ್ಳಲು ಬೆಂಗಳೂರಿಗೆ ಮರಳಿದ್ದಾರೆ.
ಐಟಿ ದಾಳಿ ವೇಳೆ ಆದಾಯ ತೆರಿಗೆ ಅಧಿಕಾರಿಗಳು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಮೂಲಗಳ ಪ್ರಕಾರ, ಚಿನ್ನಾಭರಣ ಸೇರಿದಂತೆ ದಾಖಲೆ ಇಲ್ಲದ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದರು. ಇತ್ತೀಚೆಗೆ ಆಕೆ ವಿಶಾಖಪಟ್ಟಣಂನಲ್ಲಿ ಪ್ಲಾಟ್ ಒಂದನ್ನು ಖರೀದಿಸಿದ್ದರು. ಅದರ ಬಗ್ಗೆಯೂ ಆದಾಯ ತೆರಿಗೆ ಅಧಿಕಾರಿಗಳು ನಾನಾ ಪ್ರಶ್ನೆ ಕೇಳಿ ಅನುಷ್ಕಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಇಷ್ಟೆಲ್ಲಾ ತರಲೆ ತಾಪತ್ರಯಗಳಿಂದ ಆಕೆಯ ಮನಸ್ಸು ಈಗ ತುಂಬಾ ಭಾರವಾಗಿದೆಯಂತೆ. ಕೆಲ ದಿನಗಳ ಕಾಲ ಬೆಂಗಳೂರಿನ ತಂಪು ಹವೆಯಲ್ಲಿ ವಿಹರಿಸಿದರೆ ಎಲ್ಲಾ ಸರಿಹೋಗುತ್ತದೆ. ಮನಸ್ಸು ಹೂವಿನಷ್ಟು ಹಗುರವಾಗುತ್ತದೆ ಎಂದು ಆಕೆ ಹೈದರಾಬಾದ್ ಬೆಂಗಳೂರು ವಿಮಾನ ಹತ್ತಿ ಆಗಮಿಸಿದ್ದಾರೆ ಎನ್ನುತ್ತವೆ ಮೂಲಗಳು.