»   » ರು.5 ಕೋಟಿ ಮುಟ್ಟಿದ ಜೋಗಯ್ಯ ಬಜೆಟ್

ರು.5 ಕೋಟಿ ಮುಟ್ಟಿದ ಜೋಗಯ್ಯ ಬಜೆಟ್

Posted By:
Subscribe to Filmibeat Kannada

ಪ್ರೇಮ್ ಏನೇ ಮಾಡಿದರು ಭಿನ್ನವಾಗಿರುತ್ತದೆ ಎಂಬ ಮಾತು ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. ಇಷ್ಟು ದಿನ ಜೋಗಯ್ಯನ ಬಜೆಟ್ ಸಸ್ಪೆನ್ಸ್‌ನಲ್ಲಿಡಲಾಗಿತ್ತು. ಈಗ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ 'ಜೋಗಯ್ಯ' ಬಜೆಟ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಚಿತ್ರಕ್ಕೆ ರು.5 ಕೋಟಿ ಖರ್ಚು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಈ ಮೂಲಕ ಜೋಗಯ್ಯ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮತ್ತೊಂದು ಭಾರಿ ಬಜೆಟ್ ಚಿತ್ರ ಅನ್ನಿಸಿಕೊಂಡಿದೆ. ಈಗಾಗಲೆ ಮಾತಿನ ಭಾಗ ಬಹುತೇಕ ಮುಕ್ತಾಯವಾಗಿದ್ದು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ರಕ್ಷಿತಾ ಚಿತ್ರದ ಬಗ್ಗೆ ವಿವರ ನೀಡಿದ್ದಾರೆ.

ಇತ್ತೀಚೆಗೆ ಹೋಟೆಲ್ ಅಶೋಕದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮುಂಬೈ ಮತ್ತು ಮೈಸೂರು ಹೊರತುಪಡಿಸಿದರೆ 'ಜೋಗಯ್ಯ' ಚಿತ್ರೀಕರಣಕ್ಕೆ ತಾವು ಇದುವರೆಗೂ ಹೋಗಿಲ್ಲ. ಚಿತ್ರದ ವ್ಯವಹಾರ ನೋಡಿಕೊಳ್ಳುವುದರಲ್ಲೇ ಸರಿಹೋಯಿತು ಎಂದಿದ್ದಾರೆ.

ನಮ್ಮ ತಾಯಿ ಮಮತಾ ರಾವ್ ಕೂಡ ಚಿತ್ರಕ್ಕೆ ಹಣ ಹೂಡಿದ್ದಾರೆ. ಹಾಗಾಗಿ ಪ್ರತಿಯೊಂದರ ಲೆಕ್ಕ ನಾನು ಕೊಡಬೇಕು. ಇದುವರೆಗೂ ಯಾವುದೇ ಸಮಸ್ಯೆ ಎದುರಾಗಿಲ್ಲ. ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ 'ಜೋಗಯ್ಯ' ಬರಲಿದ್ದಾನೆ ಎಂಬ ಭರವಸೆ ನೀಡಿದ್ದಾರೆ. [ರಕ್ಷಿತಾ ಪ್ರೇಮ್]

English summary
Hat Trick Hero Shivarajkumar upcoming film Jogaiah budget reached Rs.5 Cr said the producer of the movie Rakshita Prem. The talkie portions have been completed and only the songs are to be shot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada