»   »  ಶ್ರೀನಗರ ಕಿಟ್ಟಿಯ ಹೊಸ ಪ್ರಯೋಗಾತ್ಮಕ ಚಿತ್ರ U/A

ಶ್ರೀನಗರ ಕಿಟ್ಟಿಯ ಹೊಸ ಪ್ರಯೋಗಾತ್ಮಕ ಚಿತ್ರ U/A

Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ. ಇದೇ ರೀತಿಯ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ ಯುವ ನಿರ್ದೇಶಕ ಬಿ ಎಚ್ ಸಂದೀಪ್. ಈ ಹಿಂದೆ ಮಿಂಚು ಮತ್ತು ಶಿವಾನಿ ಎಂಬ ಚಿತ್ರಗಳಿಗೆ ಸಹಾಯ ನಿರ್ದೇಶಕರಾಗಿ ಸಂದೀಪ್ ಕೆಲಸ ಮಾಡಿದ್ದರು.

ಸಂದೀಪ್ ಅವರು ತಮ್ಮ ವಿಭಿನ್ನ ಚಿತ್ರಕ್ಕೆ U/A ಎಂದು ಹೆಸರಿಟ್ಟಿದ್ದಾರೆ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು ಕನ್ನಡ ಚಿತ್ರರಂದಲ್ಲಿನ ವಿವಾದಗಳ ಸುತ್ತ ಹೆಣೆಯಲಾದ ಕಥಾಹಂದರವನ್ನು ಒಳಗೊಂಡಿದೆಯಂತೆ. ಈ ಚಿತ್ರದಲ್ಲಿ ಒಟ್ಟು ಏಳು ಕತೆಗಳಿವೆಯಂತೆ. ಚಿತ್ರದಲ್ಲಿ ನೂರು ಮಂದಿಯನ್ನು ಬಳಸಿಕೊಳ್ಳಲಿದ್ದೇವೆ ಎನ್ನುತ್ತಾರೆ ಸಂದೀಪ್.

ಕನ್ನಡ ಚಿತ್ರರಂಗದಲ್ಲಿ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಾಕಷ್ಟು ವಿವಾದಗಳನ್ನು ತುಂಬ ಹತ್ತಿರದಿಂದ ನೋಡಿದ್ದೇನೆ ಎನ್ನುವ ಸಂದೀಪ್ ತಮ್ಮ ಚಿತ್ರಕ್ಕೆ ಶ್ರೀನಗರ ಕಿಟ್ಟಿಯನ್ನ್ನು ನಾಯಕ ನಟನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಆಗಸ್ಟ್ ನಿಂದ ಚಿತ್ರ ಪ್ರಾರಂಭವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada