63ನೇ ಫಿಲಂಫೇರ್ ಪ್ರಶಸ್ತಿ: ರಂಗಿತರಂಗ 6 ವಿಭಾಗಗಳಲ್ಲಿ ಸ್ಪರ್ಧೆ
ಸೈಮಾ ಪ್ರಶಸ್ತಿ ನಾಮಾಂಕಿತ ಪಟ್ಟಿಯಂತೆ 63ನೇ ಫಿಲಂಫೇರ್ ಪ್ರಶಸ್ತಿ ಪಟ್ಟಿಯ ರೇಸಿನಲ್ಲೂ ಕನ್ನಡದ ಉತ್ತಮ ಚಿತ್ರಗಳು ಸ್ಪರ್ಧಿಗಿಳಿದಿವೆ. ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಚಿತ್ರ ಅತಿ ಹೆಚ್ಚು ವಿಭಾಗದಲ್ಲಿ ಸ್ಪರ್ಧೆಯಲ್ಲಿರುವುದು ವಿಶೇಷ. ವಿವಿಧ ವಿಭಾಗಗಳಲ್ಲಿ ಒಟ್ಟು 6 ನಾಮಿನೇಷನ್ ಪಡೆದುಕೊಂಡಿದೆ.
ಈ ಬಾರಿ ಫಿಲಂ ಫೇರ್ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಠ ಚಿತ್ರ ವಿಭಾಗದಲ್ಲಿ ಅಷ್ಟೇ ಅಲ್ಲದೆ, ನಿರ್ದೇಶಕ, ಪೋಷಕ ನಟ, ಪೋಷಕ ನಟಿ, ಸಂಗೀತ, ಗಾಯಕಿ ವಿಭಾಗದಲ್ಲಿ ರಂಗಿ ತರಂಗ ನಾಮಾಂಕಿತಗೊಂಡಿದೆ. [ಫಿಲಂಫೇರ್ ಪ್ರಶಸ್ತಿ - ಯಶ್ ಮತ್ತು ಶ್ವೇತಾ ಶ್ರೀವಾತ್ಸವ್ ಬೆಸ್ಟ್.!]
ಸೈಮಾ-ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ಐದನೇ ಆವೃತ್ತಿ ನಾಮಾಂಕಿತ ಪಟ್ಟಿಯಲ್ಲಿ ದುನಿಯಾ ಸೂರಿ ಅವರ 'ಕೆಂಡಸೆಂಪಿಗೆ', ಅನೂಪ್ ಭಂಡಾರಿ ಅವರ 'ರಂಗಿತರಂಗ' ತಲಾ 10 ವಿಭಾಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿವೆ. ಈಗ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲೂ ಈ ಎರಡು ಚಿತ್ರಗಳು ಸದ್ದು ಮಾಡುತ್ತಿವೆ. [ಸೈಮಾ ಪ್ರಶಸ್ತಿ ರೇಸ್: ಕೆಂಡಸಂಪಿಗೆ, ರಂಗಿತರಂಗ ಚಿತ್ರದ್ದೇ ಹವಾ!]
ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗಾಗಿ ನೀಡುವ ಈ ಪ್ರಶಸ್ತಿ ಪ್ರದಾನ ಸಮಾರಂಭದ ವಿವರಗಳು ಸದ್ಯಕ್ಕೆ ಸಿಕ್ಕಿಲ್ಲ. ಯಾರು ಯಾರು ಪ್ರಶಸ್ತಿ ರೇಸ್ ನಲ್ಲಿದ್ದಾರೆ ಮುಂದಿನ ಸ್ಲೈಡ್ ಗಳಲ್ಲಿ ನೋಡಿ...

ಶ್ರೇಷ್ಠ ಚಿತ್ರ
* ಆಟಗಾರ
* ಕೃಷ್ಣಲೀಲಾ
* ಮೈತ್ರಿ
* ರಣವಿಕ್ರಮ
* ರಂಗಿತರಂಗ

ಶ್ರೇಷ್ಠ ನಿರ್ದೇಶಕ
* ಅನೂಪ್ ಭಂಡಾರಿ- ರಂಗಿತರಂಗ
* ಕೆಎಂ ಚೈತನ್ಯ-ಆಟಗಾರ
* ಪವನ್ ಒಡೆಯರ್-ರಣವಿಕ್ರಮ
* ಶಶಾಂಕ್ -ಕೃಷ್ಣಲೀಲಾ
* ಸೂರಿ-ಕೆಂಡಸಂಪಿಂಗೆ

ಶ್ರೇಷ್ಠ ನಟ
* ಅಜಯ್ ರಾವ್- ಕೃಷ್ಣಲೀಲಾ
* ಪುನೀತ್ ರಾಜ್ ಕುಮಾರ್- ರಣವಿಕ್ರಮ
* ಸಂಚಾರಿ ವಿಜಯ್-ನಾನು ಅವನಲ್ಲ ಅವಳು
* ಶಿವರಾಜ್ ಕುಮಾರ್- ವಜ್ರಕಾಯ
* ಯಶ್- ಮಾಸ್ಟರ್ ಪೀಸ್

ಶ್ರೇಷ್ಠ ನಟಿ
* ಮಯೂರಿ-ಕೃಷ್ಣಲೀಲಾ
* ನಭಾ ನಟೇಶ್-ವಜ್ರಕಾಯ
* ಪರೂಲ್ ಯಾದವ್- ಆಟಗಾರ
* ರಚಿತಾ ರಾಮ್- ರನ್ನ
* ಶಾನ್ವಿ ಶ್ರೀವಾಸ್ತವ- ಮಾಸ್ಟರ್ ಪೀಸ್

ಶ್ರೇಷ್ಠ ಪೋಷಕ ನಟ
* ಅನಂತ್ ನಾಗ್-ವಾಸ್ತು ಪ್ರಕಾರ
* ರಾಮಕೃಷ್ಣ- ರಾಜರಾಜೇಂದ್ರ
* ರವಿಶಂಕರ್ -ಆಟಗಾರ
* ಸಾಯಿಕುಮಾರ್-ರಂಗಿತರಂಗ
* ಸುಂದರ್- ನಾನು ಅವನಲ್ಲ ಅವಳು

ಶ್ರೇಷ್ಠ ಪೋಷಕ ನಟಿ
* ಅವಂತಿಕಾ ಶೆಟ್ಟಿ- ರಂಗಿತರಂಗ
* ಚಂದ್ರಿಕಾ-ಕೆಂಡಸಂಪಿಗೆ
* ಮಧೂ ಶಾ -ರನ್ನ
* ಪಾವನಾ- ಆಟಗಾರ
* ಸುಧಾರಾಣಿ- ವಾಸ್ತುಪ್ರಕಾರ

ಶ್ರೇಷ್ಠ ಸಂಗೀತ
* ಅನೂಪ್ ಭಂಡಾರಿ-ರಂಗಿತರಂಗ
* ಅರ್ಜುನ್ ಜನ್ಯ-ವಜ್ರಕಾಯ
* ಶ್ರೀಧರ್ ವಿ ಸಂಭ್ರಮ್-ಕೃಷ್ಣಲೀಲಾ
* ಜೆಸ್ಸಿ ಗಿಫ್ಟ್ -ಲವ್ ಯೂ ಆಲಿಯಾ
* ವಿ ಹರಿಕೃಷ್ಣ-ರಾಟೆ

ಶ್ರೇಷ್ಠ ಸಾಹಿತ್ಯ
* ಜಯಂತ್ ಕಾಯ್ಕಿಣಿ- ನೆನಪೆ ನಿತ್ಯ ಮಲ್ಲಿಗೆ (ಕೆಂಡಸಂಪಿಂಗೆ)
* ಕವಿರಾಜ್ -ನೀ ಮುದ್ದಾದ (ರಥಾವರ)
* ಪವನ್ ಒಡೆಯರ್ -ಜಗವೇ ಒಂದು ರಣರಂಗ (ರಣವಿಕ್ರಮ)
* ವಿ ನಾಗೇಂದ್ರ ಪ್ರಸಾದ್ -ಎದೆಯಳ್ ಯಾರೋ ಘಜಲ್ (ಮುದ್ದು ಮನಸೇ)
* ಯೋಗರಾಜ್ ಭಟ್ -ಮನೆಗೆ ನಾಲ್ಕು ಮೂಲೆ (ವಾಸ್ತು ಪ್ರಕಾರ)

ಶ್ರೇಷ್ಠ ಗಾಯಕ
* ಧನುಶ್- ನೋ ಪ್ರಾಬ್ಲಂ (ವಜ್ರಕಾಯ)
* ಜಾವೇದ್ ಅಲಿ -ಸಂಜೆ ವೇಳೆಲಿ (ಲವ್ ಯೂ ಆಲಿಯಾ)
* ಕಾರ್ತಿಕ್ -ನೆನೆಪೇ ನಿತ್ಯ ಮಲ್ಲಿಗೆ (ಕಾರ್ತಿಕ್)
* ಸಂತೋಶ್ ವೆಂಕಿ -ರಾಜ ರಾಣಿಯಂತೆ (ರಾಟೆ)
* ವಿಜಯ್ ಪ್ರಕಾಶ್ -ತುತ್ತೂರಿ ತಲವಾರಯ್ಯ (ಬುಲೆಟ್ ಬಸ್ಯಾ)

ಶ್ರೇಷ್ಠ ಗಾಯಕಿ
* ಅನುರಾಧಾ ಭಟ್ -ಇರಲಿ ಹೇಗೆ (ಬೆಂಕಿಪಟ್ಣ)
* ಇಂಚರಾ ರಾವ್ -ಕರೆಯೋಲೆ (ರಂಗಿತರಂಗ)
* ಇಂದು ನಾಗರಾಜ್ - ಕ ತಲಕಟ್ಟು (ಐರಾವತ)
* ಶ್ರೇಯಾ ಘೋಶಾಲ್ -ಶುರು ಶುರು (ಫಸ್ಟ್ Rank ರಾಜು)
* ವಾಣಿ ಹರಿಕೃಷ್ಣ - ರಟ್ಟ ಪುಟ್ಟ (ರಾಟೆ)


Click it and Unblock the Notifications











