90 ಮುಗಿಸಿ 'ದೇವರಾಣೆ'ಗೂ ಬರ್ತಿದಾರೆ ಲಕ್ಕಿ ಶಂಕರ್

ಈ ದೇವರಾಣೆ ಚಿತ್ರದ ಅಡಿಬರಹ 'ನಾನು ದೇವರಲ್ಲ'. ನಟ ಸಾಧು ಕೋಕಿಲಾ ಶಿಷ್ಯ ಎಂಬ ಹಣೆಪಟ್ಟಿಯಿರುವ ಶಂಕರ್ ಈ ಬಾರಿಯೂ ತನ್ನ ಗುರುವನ್ನು ಬಿಟ್ಟಿಲ್ಲ. ಆದರೆ ನಾಯಕ ಸಾಧು ಕೋಕಿಲ ಅಲ್ಲ, 'ಪಯಣ' ಖ್ಯಾತಿಯ ರವಿಶಂಕರ್. ಆದರೆ ಸಾಧು ಅವರದೂ ಪ್ರಮುಖ ಪಾತ್ರವಂತೆ.
ಇವರಿಬ್ಬರ ಹೊರತಾಗಿಯೂ ಹಾಸ್ಯ ನಟರ ದಂಡೇ ಇಲ್ಲಿದೆ. ಬಿರದಾರ್, ತಬಲ ನಾಣಿ, ಬುಲೆಟ್ ಪ್ರಕಾಶ್, ರಾಜು ತಾಳಿಕೋಟೆ, ಕುರಿ ಪ್ರತಾಪ್.. ಹೀಗೆ ಪಟ್ಟಿ ಬಹಳಷ್ಟು ಉದ್ದವಿದೆ. ಪಕ್ಕಾ ಮನರಂಜನೆಯ ಜತೆ ಮೆಸೇಜ್ ಕೂಡ ನೀಡಲು ಹೊರಟಿದ್ದಾರೆ ಶಂಕರ್. "ಯಾವುದೇ ಕಾರಣಕ್ಕೂ ಪ್ರೇಕ್ಷಕರಿಗೆ ಬೋರ್ ಹೊಡೆಸುವುದಿಲ್ಲ, ಸಿಕ್ಕಾಪಟ್ಟೆ ಭಾಷಣ ಬಿಗಿಯುವುದಿಲ್ಲ" ಎಂದಿದ್ದಾರೆ ಶಂಕರ್.
ದೇವರಾಣೆ ಚಿತ್ರ ಲಕ್ಕಿ ಶಂಕರ್ ಅವರ ನಾಲ್ಕನೇ ಚಿತ್ರ. ಗಾಂಧಿನಗರ ಮತ್ತು ಜಮಾನ ಹೇಳ ಹೆಸರಿಲ್ಲದಂತೆ ಮಾಯವಾಗಿದ್ದವು. ಆದರೆ '90' ಚಿತ್ರ ಸ್ವಲ್ಪ ಹೆಸರು ಹಾಗೂ ಕಾಸು ಎರಡನ್ನೂ ಸಂಪಾದಿಸಿತ್ತು. ಅದೇ ಆತ್ಮವಿಶ್ವಾಸದಲ್ಲಿ ಶಂಕರ್ ನಿರ್ಮಾಣಕ್ಕೂ ಸಿದ್ಧರಾಗಿದ್ದಾರೆ. ಜೊತೆಗೆ ಶಿವು ಸಂಡೂರ್ ಕೂಡ ನಿರ್ಮಾಪಕರು.
ಕಥೆ-ಚಿತ್ರಕಥೆ ಬರೆದಿರುವ ಶಂಕರ್ ನಿರ್ದೇಶನದ ಜವಾಬ್ಧಾರಿಯನ್ನೂ ಹೊತ್ತಿದ್ದಾರೆ. ಆದರೆ ಚಿತ್ರದ 'ಸಂಭಾಷಣೆ' ತಬಲಾ ನಾಟಿಯದು. ಸಾಧು ಕೋಕಿಲಾ ಸಂಗೀತ, ಎಂ.ಆರ್. ಸೀನು ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ.(ಒನ್ ಇಂಡಿಯಾ ಕನ್ನಡ)


Click it and Unblock the Notifications











