For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಪ್ರೇಮ್ ಗೆ ಈತ ನೀಡಿರುವ ಬಿರುದುಗಳನ್ನ ಒಮ್ಮೆ ಓದಿ

  By Bharath Kumar
  |

  ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಆದ ಬ್ರ್ಯಾಂಡ್ ಮತ್ತು ಟ್ರೆಂಡ್ ಹೊಂದಿರುವ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಮೊದಲ ಸಾಲಿನಲ್ಲಿ ಬರ್ತಾರೆ. ತಮ್ಮ ಪ್ರತಿಯೊಂದು ಚಿತ್ರದಲ್ಲೂ ದೊಡ್ಡ ಮಟ್ಟದ ಹವಾ ಕ್ರಿಯೇಟ್ ಮಾಡಿ ಜನರನ್ನ ಥಿಯೇಟರ್ ಗೆ ಕರೆಸಿಕೊಳ್ಳುವ ಚಾಲಕಿ ನಿರ್ದೇಶಕ.

  ಸ್ಟಾರ್ ನಟರ ಇಮೇಜ್ ಬದಲಾಯಿಸಿ ಹೊಸ ಇಮೇಜ್ ನೀಡುವ ತಂತ್ರಜ್ಞ ಎಂದೆಲ್ಲ ಗುರುತಿಸಿಕೊಂಡಿರುವ ನಿರ್ದೇಶಕ ಪ್ರೇಮ್ ಬಗ್ಗೆ ಅಭಿಮಾನಿಯೊಬ್ಬ ವಿಶೇಷ ಅಭಿಮಾನ ತೋರಿದ್ದಾನೆ.

  'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬಂದ ಜೋಗಿ ಪ್ರೇಮ್

  ಪ್ರೇಮ್ ಅವರ ಮೊದಲ ಸಿನಿಮಾದಿಂದ ಇಲ್ಲಿಯವರೆಗೂ ಎಲ್ಲ ಸಿನಿಮಾಗಳ ಬಗ್ಗೆ ಮತ್ತು ಆ ಚಿತ್ರಗಳಲ್ಲಿ ಪ್ರೇಮ್ ಹುಟ್ಟುಹಾಕಿದ ಟ್ರೆಂಡ್ ಬಗ್ಗೆ ಪದಗಳಲ್ಲಿ ಬರೆಯುವ ಮೂಲಕ ತಾನೊಬ್ಬ ಪ್ರೇಮ್ ಅಭಿಮಾನಿ ಎಂದು ರಾಮನಗರ ಮೂಲದ ತೇಜಸ್ ಕೂಗಿ ಹೇಳಿದ್ದಾರೆ. ಆ ಅಭಿಮಾನಿ ಬರೆದಿರುವ ಪದಗಳ ಪುಂಜ ಮುಂದಿದೆ ಓದಿ....

  ''ಕಮರ್ಷಿಯಲ್ ದೃಶ್ಯಗಾರ, ಸ್ಕ್ರೀನ್ ಪ್ಲೇನ ಮಾಂತ್ರಿಕ, ಮೇಕಿಂಗ್ ಯಜಮಾನ, ಫೈಟಿಂಗ್ ಒಡೆಯ, ಕೋಗಿಲೆ ಸಂಗೀತಗಾರ, ಸೆಂಟಿಮೆಂಟ್ ಸರದಾರ, ಫೀಲಿಂಗ್ ವಾರಸ್ದಾರ, ಎಡಿಟಿಂಗ್ ಪಾಳೇಗಾರ, ಡೈಲಾಗ್ ಚತುರಗಾರ, ಹೀರೋಗಳ ಸ್ಪೂರ್ತಿಗಾರ, ಕರ್ನಾಟಕದ ಹೆಮ್ಮೆಯ ನಿರ್ದೇಶಕ, ಕರ್ನಾಟಕದ ಶೋ ಮ್ಯಾನ್, ಹ್ಯಾಟ್ರಿಕ್ ನಿರ್ದೇಶಕ 'ಕರಿಯ'ದಲ್ಲಿ ಲಾಂಗ್ ಕೊಟ್ಟು 'ಎಕ್ಸ್ ಕ್ಯೂಸ್ ಮಿ'ಯಲ್ಲಿ ಸಂಗೀತ ಪ್ರೇಮಿಯಾಗಿ, 'ಜೋಗಿ'ಯಲ್ಲಿ ತಾಯಿ ಪ್ರೀತಿ ಕೊಟ್ಟು, 'ಪ್ರೀತಿ ಯಾಕೆ ಭೂಮಿ ಮೇಲಿದೆ'ಯಲ್ಲಿ ವರುಣನನ್ನು ಭೂಮಿಯನ್ನ ಒಂದು ಮಾಡಿ 'ರಾಜ್'ನಲ್ಲಿ ಕನ್ನಡಿಗನಾಗಿ 'ಪ್ರೇಮ್ ಅಡ್ಡಾ'ದಲ್ಲಿ ಲಾಂಗ್ ಹಿಡಿದು ಫೈಟ್ ಮಾಡಿ 'ಡಿಕೆ'ಯಲ್ಲಿ ರಾಜಕೀಯ ಮಾಡಿ 'ಜೋಗಯ್ಯ'ದಲ್ಲಿ ಫೀಲಿಂಗ್ ಸೆಂಟಿಮೆಂಟ್ ಮಾಸ್ ಅಂಡರ್ ವರ್ಲ್ಡ್ ಕೊಟ್ಟು 'ದಿ ವಿಲನ್' ದೃಶ್ಯಕ್ಕೆ ಬ್ರಹ್ಮನಾಗಿರುವ ಪ್ರೇಮ್ ಮತ್ತು ಟೀಮ್ ಗೆ ಆಲ್ ದಿ ಬೆಸ್ಟ್'' ಎಂದು ತಮ್ಮ ಅಭಿಮಾನವನ್ನ ಮೆರದಿದ್ದಾರೆ.

  'ವಿಲನ್' ಬಳಗ ಸೇರಿದ ಮೂವರು 'ಸ್ಟಾರ್' ನಟಿಯರು.!

  ಸದ್ಯ, ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರಕ್ಕೆ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದು ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಅದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿನಿಮಾ ಮಾಡಲಿದ್ದಾರೆ.

  English summary
  One of the fan has Praised to Director Prem for his talent. and also he appreciated prem's direction style, filmmaking style.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X