For Quick Alerts
  ALLOW NOTIFICATIONS  
  For Daily Alerts

  ಕೊನೆಗೂ 'ಆಯುಷ್ಮಾನ್ ಭವ' ಟ್ರೈಲರ್ ದಿನಾಂಕ ಪ್ರಕಟ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಸಿನಿಮಾ ನವೆಂಬರ್ 1 ರಂದು ರಾಜ್ಯಾದಂತ್ಯ ತೆರೆಕಾಣುತ್ತಿದೆ. ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ಸಂತೋಷ್ ಸೇರಿದಂತೆ ಮಲ್ಟಿಫ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಶಿವಣ್ಣನ ಸಿನಿಮಾ ಎಂಟ್ರಿಯಾಗುತ್ತಿದೆ.

  ಸಿನಿಮಾ ರಿಲೀಸ್ ಗೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಇದುವರೆಗೂ ಚಿತ್ರದ ಟ್ರೈಲರ್ ಬಂದಿಲ್ಲ ಎಂಬ ಅಚ್ಚರಿ ಅಭಿಮಾನಿಗಳನ್ನ ಕಾಡುತ್ತಿದೆ. ಟೀಸರ್ ಬಿಟ್ಟು ಕುತೂಹಲ ಮೂಡಿಸಿದ್ದ 'ಆಯುಷ್ಮಾನ್ ಭವ' ಟ್ರೈಲರ್ ಅದ್ಯಾವಾಗ ಬರುತ್ತೆ ಎಂದು ಕಾಯುತ್ತಿದ್ದವರಿಗೆ ಈಗ ಖುಷಿ ವಿಚಾರ ಬಂದಿದೆ.

  ಸಂತೋಷ್ ಚಿತ್ರಮಂದಿರದಲ್ಲಿ ನಡೆಯಲಿದೆ 'ಆಯುಷ್ಮಾನ್ ಭವ' ಪ್ರೀ ರಿಲೀಸ್ ಕಾರ್ಯಕ್ರಮಸಂತೋಷ್ ಚಿತ್ರಮಂದಿರದಲ್ಲಿ ನಡೆಯಲಿದೆ 'ಆಯುಷ್ಮಾನ್ ಭವ' ಪ್ರೀ ರಿಲೀಸ್ ಕಾರ್ಯಕ್ರಮ

  ಹೌದು, ಆಯುಷ್ಮಾನ್ ಭವ ಚಿತ್ರದ ಟ್ರೈಲರ್ ದಿನಾಂಕ ಘೋಷಣೆಯಾಗಿದೆ. ದೀಪಾವಳಿ ಪ್ರಯುಕ್ತ ಅಕ್ಟೋಬರ್ 27 ರಂದು ಟ್ರೈಲರ್ ಬರ್ತಿದೆ. ಅಕ್ಟೋಬರ್ 26 ರಂದು ಪ್ರಿ-ರಿಲೀಸ್ ಕಾರ್ಯಕ್ರಮವಿದ್ದು, ಅದಾದ ಬಳಿಕ ಟ್ರೈಲರ್ ಅಭಿಮಾನಿಗಳ ಎದುರು ಬರಲಿದೆ.

  ಮತ್ತೆ ದೆವ್ವದ ಬೆನ್ನತ್ತಿ ಹೋದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ಮತ್ತೆ ದೆವ್ವದ ಬೆನ್ನತ್ತಿ ಹೋದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

  ದ್ವಾರಕೀಶ್ ಈ ಚಿತ್ರ ನಿರ್ಮಿಸಿದ್ದು, ಪಿ ವಾಸು ಆಕ್ಷನ್ ಕಟ್ ಹೇಳಿದ್ದಾರೆ. ಆಪ್ತಮಿತ್ರ, ದೃಶ್ಯ, ಶಿವಲಿಂಗ ಚಿತ್ರದ ಬಳಿಕ ಆಯುಷ್ಮಾನ್ ಭವ ಸಿನಿಮಾ ಮೂಲಕ ಪಿ ವಾಸು ಕನ್ನಡಿಗರ ಮುಂದೆ ಬರ್ತಿದ್ದು, ನಿರೀಕ್ಷೆ ಸ್ವಲ್ಪ ಜಾಸ್ತಿನೇ ಇದೆ.

  ಇನ್ನುಳಿದಂತೆ 'ಆಯುಷ್ಮಾನ್ ಭವ' ಸಿನಿಮಾ ಕುಟುಂಬ ಸಮೇತ ಕೂತು ನೋಡುವ ಚಿತ್ರ ಎಂಬುದು ಈಗಾಗಲೇ ಪಕ್ಕಾ ಆಗಿದೆ. ಬಹುದೊಡ್ಡ ತಾರಬಳಗ ಹೊಂದಿರುವ ಇದು ಸಸ್ಪೆನ್ಸ್ ಥ್ರಿಲ್ಲರ್ ಎಂದು ಹೇಳಲಾಗ್ತಿದೆ. ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದು, ಅನಂತ್ ನಾಗ್, ತಮಿಳು ನಟ ಪ್ರಭು, ರಂಗಾಯಣ ರಘು ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Kannada actor shiva rajkumar starrer Aayushmanbhava movie trailer will release on october 27th. the movie directed by p vasu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X