Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಂಬಿ' ಹುಟ್ಟು ಹಬ್ಬಕ್ಕೆ 'ಅಭಿಷೇಕ್ ಅಂಬರೀಶ್' 3ನೇ ಸಿನಿಮಾ ಲಾಂಚ್!
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದು ಬಹು ಸಮಯವಾಗಿದೆ. ಈಗಾಗಲೇ ಮೊದಲ ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದಾರೆ. 'ಅಮರ್' ಸಿನಿಮಾದೊಂದಿಗೆ ಅಭಿಷೇಕ್ ಒಂದು ಮಟ್ಟಿಗೆ ಅಭಿನಯದ ಮೂಲಕ ಜನ ಮನ ಗೆದ್ದಿದ್ದಾರೆ.
'ಅಮರ್' ಸಿನಿಮಾದ ಬಳಿಕ ಈಗ 'ಬ್ಯಾಡ್ ಮ್ಯಾನರ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಸೂರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಾ ಇದ್ದಾರೆ.
ಅಭಿಷೇಕ್
ಅಂಬರೀಶ್
ಮತ್ತು
ತಮಿಳು
ಹುಡುಗಿಯ
ಲವ್
ಸ್ಟೋರಿ
ಕೇಳಿದ್ರ?
ಈ ನಡುವೆ ಅಭಿಷೇಕ್ ಹೊಸ ಸಿನಿಮಾದ ಮೂಲಕ ಸುದ್ದಿ ಆಗ್ತಿದ್ದಾರೆ. ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಇನ್ನು ಶೂಟಿಂಗ್ ಹಂತದಲ್ಲಿ ಇದೆ. ಆದರೆ ಅದಾಗಲೆ ಮುಂದಿನ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಇದೀಗ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಹೊರ ಬಂದಿದೆ ಮುಂದೆ ಓದಿ...

ಅಭಿಷೇಕ್ ಅಂಬರೀಶ್ 3ನೇ ಸಿನಿಮಾ!
ಅಭಿಷೇಕ್ ಅಂಬರೀಶ್ ಮುಂದಿನ ಸಿನಿಮಾದ ಬಗ್ಗೆ ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಅಭಿಷೇಕ್ ಮೂರನೇ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದೆ. ಅಭಿಷೇಕ್ ಅಂಬರೀಶ್ ಫಸ್ಟ್ ಲುಕ್ ರಿಲೀಸ್‌ಗೆ ತಯಾರಿ ನಡೆದಿದೆ. ಈ ವಿಚಾರವನ್ನು ಸಿನಿಮಾ ನಿರ್ಮಾಣ ಸಂಸ್ಥೆ RRR ಮೋಷನ್ ಪಿಕ್ಚರ್ ಪೋಸ್ಟರ್ ಹಂಚಿಕೊಳ್ಳಯವ ಮೂಲಕ ಖಚಿತಪಡಿಸಿದೆ.
ಅಭಿಷೇಕ್
ಅಂಬರೀಶ್
4ನೇ
ಚಿತ್ರಕ್ಕೆ
ತಯಾರಿ,
ಫೇಮಸ್
ಡೈರೆಕ್ಟರ್
ಯಾರು?

ಅಂಬರೀಶ್ ಹುಟ್ಟುಹಬ್ಬಕ್ಕೆ ಕಾಳಿ ಫಸ್ಟ್ ಲುಕ್!
ಮೇ 29ರಂದು ಅಭಿಷೇಕ್ ಅಂಬರೀಶ್ 3ನೇ ಸಿನಿಮಾ ಲಾಂಚ್ ಆಗಲಿದೆ. ಮೇ 29 ನಟ ಅಂಬರೀಶ್ ಹುಟ್ಟುಹಬ್ಬ ಹಾಗಾಗಿ ಅಂದೆ ಸಿನಿಮಾದ ಪೋಸ್ಟರ್ ಲಾಂಚ್ ಮಾಡಲು ಚಿತ್ರತಂಡ ತಯಾರಾಗಿದೆ. ಇನ್ನು ಚಿತ್ರಕ್ಕೆ ಹೆಬ್ಬುಲಿ ಕೃಷ್ಣ ನಿರ್ದೇಶಕ ಇದೆ. ಅವರದ್ದೇ ಕಥೆ ಕೂಡ ಇದೆ. ಇನ್ನು ಈ ಚಿತ್ರದ ಕಥೆ ನೈಜ ಘಟನೆ ಆಧರಿಸಿದೆ ಎನ್ನಲಾಗಿದೆ.

ಅಭಿಷೇಕ್ ಮುಂದಿನ ಚಿತ್ರದ ಟೈಟಲ್ 'ಕಾಳಿ'!
ಅಭಿಷೇಕ್ ಅಂಬರೀಶ್ ಮುಂದಿನ ಸಿನಿಮಾ 'ಕಾಳಿ'. ಈ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಅಭಿಷೇಕ್ ಕಾಣಿಸಿಕೊಳ್ಳುತ್ತಾ ಇದ್ದಾರೆ. ಇದು ಅಪ್ಪಟ್ಟ ದೇಶಿಯ ಪ್ರೇಮ ಕಥೆ. ಹಾಗಂತ ಈ ಚಿತ್ರ ಕೇವಲ ಲವ್ ಸ್ಟೋರಿ ಅಲ್ಲ, ಪಕ್ಕಾ ಕಮರ್ಶಿಯಲ್ ಸಿನಿಮಾ ಅಂತೆ. ಚಿತ್ರಕ್ಕೆ 'ಕಾಳಿ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ನಿರ್ದೇಶಕ ಹೆಬ್ಬುಲಿ ಕೃಷ್ಣ ನಿರ್ದೇಶನವಿದೆ. ಈದು ಅಭಿಷೇಕ್ 3ನೇ ಸಿನಿಮಾ.
ಅಭಿಷೇಕ್
ಅಂಬರೀಶ್
4ನೇ
ಚಿತ್ರಕ್ಕೆ
ತಯಾರಿ,
ಫೇಮಸ್
ಡೈರೆಕ್ಟರ್
ಯಾರು?

1991ರಲ್ಲಿ ನಡೆದ ನೈಜ ಪ್ರೇಮ ಕಥೆ!
ಈ ಸಿನಿಮಾ ನಿಜವಾಗಿಯೂ ನಡೆದ ಕಥೆಯಂತೆ. "1991ರ ಸಮಯದಲ್ಲಿ ಕಾವೇರಿ ಗಲಾಟೆ ಬಹಳ ಜೋರಾಗಿ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಕೊಳ್ಳೇಗಾಲ, ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ನಡೆದ ಪ್ರೇಮಕಥೆ ಇದು. ಕಾವೇರಿ ಗಲಾಟೆ ಇಲ್ಲಿ ಹಿನ್ನೆಲೆ ಮಾತ್ರ. ನಾಯಕನಿಗೂ.. ನಾಯಕಿಗೂ ಸಂಬಂಧ ಇರಲ್ಲ. ಆದರೂ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅವರು ಆ ತೊಂದರೆಗೆ ಸಿಕ್ಕಿದ್ದು ಹೇಗೆ ಅನ್ನೋದನ್ನೇ ಸಿನಿಮಾದಲ್ಲಿ ತೋರಿಸುತ್ತೇವೆ." ಎಂದಿದ್ದಾರೆ ನಿರ್ದೇಶಕ ಕೃಷ್ಣ.