Don't Miss!
- News
Karnataka assembly election 2023: ಮೂಲ ಕಾಂಗ್ರೆಸ್ಸಿಗರನ್ನು ಕಾಯುವುದೇ ನನ್ನ ಕೆಲಸ: ವೀರಪ್ಪ ಮೊಯ್ಲಿ
- Sports
Ind vs Aus Test: ರೋಹಿತ್ ಶರ್ಮಾ ನಾಯಕತ್ವವನ್ನು ನಿರ್ಧರಿಸಲಿವೆ ಮುಂದಿನ 5 ಟೆಸ್ಟ್ ಪಂದ್ಯಗಳು
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನೀಶ್-ದೀಪಾ ಸನ್ನಿಧಿ ಜೋಡಿಯ 'ಮಾಂಜಾ' ಶುರು
'ನಮ್ ಏರಿಯಾದಲ್ ಒಂದಿನಾ' ಹಾಗೂ 'ಪೊಲೀಸ್ ಕ್ವಾರ್ಟಸ್' ಸಿನಿಮಾಗಳನ್ನ ಮಾಡಿ ಸುಮ್ಮನಿದ್ದ ನಟ ಅನೀಶ್ ತೇಜೇಶ್ವರ್, ಇತ್ತೀಚೆಗೆ 'ಅಕಿರ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಮೊದಲೆರಡು ಚಿತ್ರಗಳಿಗಿಂತ 'ಅಕಿರ' ತಕ್ಕ ಮಟ್ಟಿಗೆ ಅನೀಶ್ ಗೆ ಯಶಸ್ಸು ತಂದುಕೊಟ್ಟಿತ್ತು.
'ಅಕಿರ'ದಲ್ಲಿ ಇಬ್ಬರು ನಾಯಕಿಯರು ಜೊತೆ ಡ್ಯುಯೆಟ್ ಹಾಡಿದ್ದ ಅನಿಶ್, ಈಗ ಸ್ಯಾಂಡಲ್ ವುಡ್ ನ ಲಕ್ಕಿ ನಾಯಕಿಯೊಂದಿಗೆ 'ಮಾಂಜಾ' ಕೊಡೊಕೆ ಸಿದ್ದವಾಗಿದ್ದಾರೆ.[ಯಶ್ ಬದ್ಲು ಅನೀಶ್ 'ಮಾಂಜಾ' ಕೊಡ್ತಾರಂತೆ.!]
ಹೌದು, ಅನೀಶ್ ಅಭಿನಯಿಸಲಿರುವ ಹೊಸ ಚಿತ್ರ 'ಮಾಂಜಾ' ಇತ್ತೀಚಿಗೆ ಮುಹೂರ್ತ ಮಾಡಿಕೊಂಡಿದೆ. 'ಮಾಂಜಾ' ಚಿತ್ರದಲ್ಲಿ ಅನೀಶ್ ಗೆ ನಾಯಕಿ ದೀಪಾ ಸನ್ನಿಧಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮೂಹೂರ್ತಕ್ಕೆ ಆಗಮಿಸಿದ್ದ ರಾಕಿಂಗ್ ಸ್ಟಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು.

ಈ ಮೊದಲು 'ಮಾಂಜಾ' ಚಿತ್ರವನ್ನ ಯಶ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಯಶ್ ಬದಲು ಈಗ ಅನೀಶ್ 'ಮಾಂಜಾ'ಗೆ ನಾಯಕನಾಗಿದ್ದಾರೆ.'ಮಾಂಜಾ' ಚಿತ್ರವನ್ನ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯಶ್ ಅಭಿನಯದ 'ಲಕ್ಕಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸೂರಿ, ನೀನಾಸಂ ಸತೀಶ್ ಅಭಿನಯಿಸಿದ್ದ 'ಕ್ವಾಟ್ಲೆ ಸತೀಶ್' ಚಿತ್ರಕ್ಕೆ ಬಂಡವಾಳ ಹಾಕಿದ್ದರು.[ಬರೋಬ್ಬರಿ 46 ಕಥೆ ಕೇಳಿ 'ಓಕೆ' ಎಂದ್ರಾ 'ಈ' ನಟ ಮಹಾಶಯ]
ಇನ್ನು ಅಕಿರ' ಚಿತ್ರ ನಿರ್ಮಿಸಿದ್ದ ಚೇತನ್ ಕುಮಾರ್ ಈ ಚಿತ್ರಕ್ಕೂ ಹಣ ಹಾಕುತ್ತಿದ್ದಾರೆ. ಜೊತೆಗೆ ಎಸ್.ಎಸ್. ರೆಡ್ಡಿ ಮತ್ತು ಶ್ರೀಕಾಂತ್ ಪ್ರಸನ್ನ ಸಹ ನಿರ್ಮಾಣದಲ್ಲಿ ಚೇತನ್ ಕುಮಾರ್ ಜೊತೆಗೆ ಕೈ ಜೋಡಿಸುತ್ತಿದ್ದಾರೆ. ಈ ಚಿತ್ರ ಎಸ್2 ಎಂಟರ್‌ಟೈನ್ ಮೆಂಟ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದೆ.
ಇದು ಕಮರ್ಷಿಯಲ್ ಮನರಂಜನಾ ಚಿತ್ರವಾಗಿದ್ದು, ಚಿಕ್ಕಣ್ಣ, ಸಾಧುಕೋಕಿಲಾ, ರವಿಶಂಕರ್, ರಂಗಾಯಣ ರಘು ಮತ್ತು ಕಡ್ಡಿಪುಡಿ ಚಂದ್ರು ಸಿನಿಮಾದ ತಾರಾಗಣದಲ್ಲಿದ್ದಾರಂತೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ರಸೂಲ್ ಎಲ್ಲೂರ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಬಹುತೇಕ ಬೆಂಗಳೂರು ಹಾಗು ಮೈಸೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.